ಕಾಸರಗೋಡು, ಫೆ 24 (DaijiworldNews/HR): ಕೇರಳ-ಕರ್ನಾಟಕ ಗಡಿಯ ತಲಪಾಡಿಯಲ್ಲಿ ನವೀಕೃತ ಅರಣ್ಯ ಹಾಗೂ ವನ್ಯ ಜೀವಿ ಇಲಾಖೆಯ ಚೆಕ್ ಪೋಸ್ಟ್ ಅನ್ನು ಕೇರಳ ಅರಣ್ಯ ಸಚಿವ ಎ.ಕೆ ಶಶೀಂದ್ರನ್ ಇಂದು ಬೆಳಿಗ್ಗೆ ಉದ್ಘಾಟಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಕೆ. ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯೆ ಶಫಾ ಫಾರೂಕ್ , ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆ ರೋ, ಅರಣ್ಯ ಸಂರಕ್ಷಣಾಧಿಕಾರಿ ಪಿ. ಧನೇಶ್ ಕುಮಾರ್, ಅಜಿತ್ ಕೆ. ರಾಮನ್, ಕಣ್ಣೂರು ಉತ್ತರ ವಲಯ ಅರಣ್ಯಾಧಿಕಾರಿ ಕೆ.ಎಸ್ ದೀಪಾ ಮೊದಲಾದವರು ಮಾತನಾಡಿದರು.