ಬಂಟ್ವಾಳ, ಫೆ 23 (DaijiworldNews/SM): ಹೆದ್ದಾರಿ ಕಾಮಗಾರಿಗೆಂದು ತಂದು ಇರಿಸಿದ್ದ ಕಬ್ಬಿಣದ ರಾಡ್ ಗಳನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ-75 ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧ ಪಟ್ಟ ಸ್ವತ್ತುಗಳನ್ನು ರಸ್ತೆಯಲ್ಲಿ ಇರಿಸಲಾಗಿತ್ತು.
ಆದ್ರೆ ಫೆ.22ರಂದು ರಾತ್ರಿ ಮಾರುತಿ ಆಲ್ಟೋ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್ ಗಳನ್ನು ಕಳವು ಮಾಡುವ ಉದ್ದೇಶದಿಂದ ಕಾರಿಗೆ ತುಂಬುತ್ತಿದ್ದು, ಈ ವೇಳೆ ರೌಂಡ್ಸ್ ನಲ್ಲಿದ್ದ ಕೆಎನ್ ಆರ್ ಕನ್ಸ್ಟ್ರಕ್ಷನ್ ಕಂಪೆನಿಯವರು ಗಮನಿಸಿ ಕಾರು ಬಳಿಗೆ ಹೋದಾಗ ಅಪರಿಚಿತ ವ್ಯಕ್ತಿಗಳು ಕಾರನ್ನು ಬಿಟ್ಟು ಓಡಿ ಪರಾರಿಯಾಗಿದ್ದಾರೆ.
ನಂದಕುಮಾರ್ ಆರ್, ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಲಿಮಿಟೆಡ್, ಬಿಸಿರೋಡ್ ಎಂಬವರ ದೂರಿನಂತೆ ಕಳ್ಳತನ ಮಾಡಲು ಬಳಸಿದ ಕಾರು ಮತ್ತು ಅದರಲ್ಲಿ ತುಂಬಿಸಿದ ರಾಡ್ ಗಳನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು, ಕಳ್ಳತನ ಮಾಡಲು ಪ್ರಯತ್ನಿಸಿದ ರಾಡ್ ಗಳ ಅಂದಾಜು ಮೌಲ್ಯ ರೂ.5000ವಾಗಿದ್ದು, ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಅಪರಿಚಿರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.