ಮಂಗಳೂರು, ಫೆ 23 (DaijiworldNews/SM): ಮುಡಿಪು ಸಮೀಪದ ಕುರ್ನಾಡು ಪದವಿಪೂರ್ವ ಪ್ರಥಮದರ್ಜೆ ಕಾಲೇಜು ೨2015ರಲ್ಲಿ ಆರಂಭಗೊಂಡಿದೆ. ಗಡಿ ಪ್ರದೇಶವಾಗಿದೆ. ಒಟ್ಟಿಗೆ ನಾಲ್ಕು ಕೋಟಿ ಅನುದಾನ ನೀಡಲಾಗಿದೆ. ನ್ಯಾಕ್ ನಿಂದ ಬಿ+ ಮಾನ್ಯತೆ ಪಡೆದಿರುವ ಸರಕಾರಿ ಕಾಲೇಜಿಗೆ ಇದೀಗ ಮತ್ತೆ ಅನುದಾನದ ಅಗತ್ಯವಿದೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸದನದಲ್ಲಿ ಆಗ್ರಹಿಸಿದ್ದಾರೆ.
ಸರಕಾರದಿಂದ ಬಿಲ್ಡಿಂಗ್ ಅನುದಾನ ಬಿಡುಗಡೆ ಮಾಡಬೇಕು. ಉಳಿದಂತೆ ಪೀಠೋಪಕರಣ, ಲ್ಯಾಬ್ ಇನ್ನಿತರ ಮೂಲಗಳಿಂದ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಂಡು ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಈ ನಿಟ್ಟಿನಲ್ಲಿ ಸರಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.