ಪುತ್ತೂರು, ಫೆ 22 (DaijiworldNews/MS): ಮಂಗಳೂರು- ಪುತ್ತೂರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕನೋರ್ವ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ಮೇಲೆ ಹಲ್ಲೆಗೈದ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿರ್ವಾಹಕಿ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಪ್ರಯಾಣಿಕ ಹಸನ್ನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಫೆ. 20ರಂದು ಸಂಜೆ ಪುತ್ತೂರು ನಿಲ್ದಾಣದಿಂದ ಬಸ್ ಹೊರಟು ನಗರದ ಮಾರುಕಟ್ಟೆ ಬಳಿಯ ತಂಗುದಾಣ ತಲುಪಿದಾಗ ಅಂಗವಿಕಲ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ನಿರ್ವಾಹಕಿ ಕೇಳಿದ್ದು, ಆಕ್ಷೇಪಿಸಿದ ಆರೋಪಿಯು ಅವ್ಯಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಬಸ್ನಿಂದ ಇಳಿದು ಓಡಿ ಪರಾರಿಯಾಗಿದ್ದ.
ನಿರ್ವಾಹಕಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿ ಹಸನ್ನನ್ನು ಬಂಧಿಸಿದ್ದಾರೆ.