ವಿಟ್ಲ, ಫೆ 21 (DaijiworldNews/MS): ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ಮನೆಯ ಬಾಗಿಲು ಒಡೆದು ಸುಮಾರು 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಝಬೈದಾ ಅವರ ಮನೆಗೆ ಕಳ್ಳರು ಮನೆಯ ಆರ್ಸಿಸಿ ಛಾವಣಿಯ ದ್ವಾರವನ್ನು ಒಡೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್ ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್, ಸುಮಾರು 8 ಗ್ರಾಂ ತೂಕದ ಮಗುವಿನ ಕಾಲು ಚೈನ್, ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ, ಸುಮಾರು 12 ಗ್ರಾಂ ತೂಕದ ಕೈ ಬಳೆ ಹಾಗೂ ಗಾಡ್ರೇಜ್ ನಲ್ಲಿದ್ದ 15,000 ನಗದು ಕಳ್ಳತನವಾಗಿದ್ದು, ಒಟ್ಟು ಚಿನ್ನಾಭರಣಗಳು 48 ಗ್ರಾಂ ಆಗಿದ್ದು ಅಂದಾಜು ಮೌಲ್ಯ ರೂಪಾಯಿ 96000 ಆಗಬಹುದು. ಕಳ್ಳತನವಾಗಿರುವ ಚಿನ್ನಾಭರಣಗಳ ಮತ್ತು ನಗದು ಹಣದ ಒಟ್ಟು ಅಂದಾಜು ಮೌಲ್ಯ1,11,000/-ರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.