ಕಾಸರಗೋಡು, ಫೆ 20 (DaijiworldNews/SM): ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಕೋಮುವಾದದ ವಿರುದ್ಧ ಸಿಪಿಐಎಂ ಕೇರಳ ರಾಜ್ಯದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ಟರ್ ನೇತೃತ್ವದ ರಾಜ್ಯ ಮಟ್ಟದ ಜನಕೀಯ ಪ್ರತಿರೋಧ ಯಾತ್ರೆಗೆ ಸೋಮವಾರ ಕುಂಬಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಾದು ಹೋಗಲಿರುವ ಜಾಥಾ ಮಾರ್ಚ್ 28ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.
ಸಮಾರಂಭದಲ್ಲಿ ಶಾಸಕ ಸಿ.ಎಚ್. ಕು೦ಞ೦ಬು, ಕೆ. ಟಿ ಜಲೀಲ್, ಕೆ. ಪಿ.ಸತೀಶ್ಚಂದ್ರನ್, ಪಿ.ಕೆ. ಶ್ರೀಮತಿ ಟೀಚರ್, ಕೆ. ವಿ. ಕು೦ಞರಾಮನ್, ಎಂ.ಸ್ವರಾಜ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು