ಸುಳ್ಯ, ಫೆ 20 (DaijiworldNews/SM): ಆನೆ ದಾಳಿಯಿಂದಾಗಿ ಇಬ್ಬರು ಮೃತಪಟ್ಟಿದ್ದು, ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳುವ ನಿಟ್ಟಿನಲ್ಲಿ ಮನೆಗೆ ತೆರಳಿದ ಸಚಿವ ಅಂಗಾರ ಅವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪದೇ ಪದೇ ಆನೆ ದಾಳಿ ನಡೆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಬ್ಬರು ಸಾವನ್ನಪ್ಪಿದಾಗ ಓಡೋಡಿ ಬಂದಿದ್ದೀರಿ. ಚುನಾವಣೆ ಹತ್ತಿರವಾದಾಗ ನಮ್ಮ ನೆನಪಾಯಿತು. ಬಡವರು ಸತ್ತಾಗ ನ್ಯಾಯಕೊಡುವವರಿಲ್ಲ. ಸತ್ತ ಮೇಲೆ ಮನೆಗೆ ಬಂದಲ್ಲಿ ಮೃತರು ವಾಪಾಸಾಗುತ್ತಾರಾ? ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಸಾರ್ವಜನಿಕರು ಕೂಡ ಸಚಿವರ ವಿರುದ್ಧ ಗರಂ ಆಗಿದ್ದರು. ಈ ಹಿಂದೆಯೂ ಆನೆ ದಾಳಿಯಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ. ಆ ಸಂದರ್ಭದಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇನ್ನು ಸಾರ್ವಜನಿಕರ ವಾಗ್ದಾಳಿಯಿಂದಾಗಿ ಸಚಿವರು ಸ್ಥಳದಿಂದ ತೆರಳಬೇಕಾದ ಸನ್ನಿವೇಶ ಎದುರಾಯಿತು.