ಮಂಗಳೂರು, ಫೆ 20 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೆಬ್ರವರಿ 1-15ರವರೆಗೆ ದುಬೈ ಮತ್ತು ಬಹ್ರೇನ್ನಿಂದ ಆಗಮಿಸಿದ್ದ ಐವರು ಪುರುಷ ಪ್ರಯಾಣಿಕರಿಂದ 91,35,850 ರೂಪಾಯಿ ಮೌಲ್ಯದ 1625.0 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್ಗಳಾಗಿ ಮಾಡಿ ಗುದನಾಳದಲ್ಲಿ ಮರೆಮಾಚಿ, ಟ್ರಾಲಿ ಬ್ಯಾಗ್ ನ ಹ್ಯಾಂಡಲ್ ನಲ್ಲಿ ಮರೆಮಾಚಿದ್ದು, ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಚಿದ್ದು ಸೇರಿ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಇನ್ನು ಚಿನ್ನದ ಮಾರುಕಟ್ಟೆ ಮೌಲ್ಯ 91ಲಕ್ಷದ 35 ಸಾವಿರದ 850 ರೂ.ಆಗಿದ್ದು, ಭಾರತೀಯ ರೂಪಾಯಿ 6ಲಕ್ಷದ 54 ಸಾವಿರದ 750ರೂ. ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.