ಮಂಗಳೂರು,ಮಾ 16 (MSP): ಅರಬ್ಬೀ ಸಮುದ್ರದಲ್ಲಿ ಆಳ ಮೀನುಗಾರಿಕೆ ಮುಗಿಸಿ ಬರುತ್ತಿದ್ದಾಗ 30 ನಾಟಿಕಲ್ ಮೈಲು ದೂರದಲ್ಲಿ ದೋಣಿಯೊಂದು ಮಾ.14 ರ ಗುರುವಾರ ರಾತ್ರಿ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ ಒಂಬತ್ತು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ನವಾಝ್ ಎಂಬುವವರ ಒಡೆತನದ ‘ಕೈಝರ್’ ಎಂಬ ದೋಣಿ ಕಳೆದ ಮಾ.9 ರ ಶನಿವಾರ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ರಾತ್ರಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದರು.
30 ನಾಟಿಕಲ್ ಮೈಲು ದೂರದಲ್ಲಿ ದೋಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಅಪಾಯ ಅರಿತ ಮೀನುಗಾರರು ದೋಣಿ ಮುಳುಗಲು ಆರಂಭವಾಗುತ್ತಿದ್ದಂತೆ ಮೀನುಗಾರರು ಅದೇ ಮಾಲೀಕರ ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರನ್ನು ಸಂಪರ್ಕಿಸಿ ನೆರವು ಕೋರಿದ್ದರು. ತಕ್ಷಣ ಅಲ್ಲಿಗೆ ಹೋದ ಇನ್ನೊಂದು ದೋಣಿಯ ಮೀನುಗಾರರು ಮುಳುಗುತ್ತಿದ್ದ ದೋಣಿಯಲ್ಲಿದ್ದವರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.