ಉಡುಪಿ, ಫೆ 19 (DaijiworldNews/DB): ಉಡುಪಿ ಜಿಲ್ಲೆಯ ಬಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಕಲ್ಲುಗುಡ್ಡೆಯ ದಿನಕರ ಕೆಂಜೂರು ಅವರ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದಿನಕರ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ "ನಾಲೇಜ್ ಮ್ಯಾನೇಜ್ಮೆಂಟ್ ಪಾಲಿಸೀಸ್ ಎಂಡ್ ಪ್ರ್ಯಾಕ್ಟೀಸ್: ಎ ಸ್ಟಡಿ ವಿದ್ ರೆಪರೆನ್ಸ್ ಟು ಕಂಪ್ಯೂಟರ್ ಸಾಫ್ಟ್ವೇರ್ ಎಂಡ್ ಸರ್ವಿಸಸ್ ಕಂಪನೀಸ್ ಇನ್ ಕರ್ನಾಟಕ" ಎಂಬ ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಇವರು ಕರ್ನಾಟಕ ರಾಜ್ಯದ ಅಂಚೀಕೃತ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಮೂರನೇಯವರಾಗಿದ್ದು ವಿಕಲಚೇತನ ವ್ಯಕ್ತಿಯಾಗಿದ್ದಾರೆ. ದಿನಕರ ಅವರು ಸುಕ್ರ ಕೊರಗ ಕೆಂಜೂರು ಮತ್ತು ದಿ. ಶಾಂತ ಕೆಂಜೂರು ಅವರ ಪುತ್ರ. ಡಾ. ದಿನಕರ ಕೆಂಜೂರು ಪ್ರ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.