ಕಾರ್ಕಳ, ಫೆ 19 (DaijiworldNes/HR): ಆಂದ್ರಪ್ರದೇಶದ ನಿಯೋಜಿತ ರಾಜ್ಯಪಾಲರು, ಸರ್ವೋಚ್ಚ ನ್ಯಾಯಾಲಯದ ನಿವ್ರತ್ತ ನ್ಯಾಯಾಧೀಶರ ಅಬ್ದುಲ್ ನಝೀರ್ ಅವರು ತಮ್ಮ ವೃತ್ತಿಯ ನಂತರ ರಾಜ್ಯಪಾಲರಾಗಿ ಪ್ರಮಾಣ ವಚನ ಪಡೆಯುವ ಮುನ್ನ ಸಪತ್ನಿಕರಾಗಿ ತಮ್ಮ ಗುರು ಎಂ.ಕೆ ವಿಜಯ್ ಕುಮಾರ್ ಅವರ ಸ್ವ ಗೃಹ ಕಾರ್ಕಳದ ಸುವ್ರತ ಭವನಕ್ಕೆ ಆಗಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ಸಂಧರ್ಭದಲ್ಲಿ ಹಿರಿಯ ನ್ಯಾಯವಾದಿ ಶ್ರೀ ಎಂ ಕೆ ವಿಜಯ್ ಕುಮಾರ್ ತಮ್ಮ ಶಿಷ್ಯ ನ್ಯಾಯಮೂರ್ತಿ ಶ್ರೀ ಅಬ್ದುಲ್ ನಝೀರ್ ರವರು ಭಾರತೀಯ ನ್ಯಾಯಾಂಗಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.
ಅಯೋದ್ಯಾ ಪ್ರಕರಣದ ಬಗೆಹರಿಸುವಲ್ಲಿ ಅವರ ಐತಿಹಾಸಿಕ ತೀರ್ಪು, ತಲಾಖ್ ಪ್ರಕರಣದಲ್ಲಿ ಮುಸಲ್ಮಾನ ಮಹಿಳೆಯರ ಪರವಾದ ಚಾರಿತ್ರಿಕ ತೀರ್ಪು, ಭಾರತೀಯ ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಯ ಬಗೆಗಿನ ತೀರ್ಪು, ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗೆಗಿನ ಮಹತ್ವದ ತೀರ್ಪು, ತುಳುನಾಡಿನ ಕಂಬಳದ ನ್ಯಾಯಬದ್ದತೆಯನ್ನು ಎತ್ತಿಹಿಡಿದ ತೀರ್ಪು, ಭಾರತೀಯ ನಾಗರಿಕರ ಖಾಸಗೀತನದ ಹಕ್ಕನ್ನು (Right to Privacy) ಮೂಲಭೂತ ಹಕ್ಕೆಂದು ಸಾರಿದ ಚಾರಿತ್ರಿಕ ತೀರ್ಪು, ಈ ರೀತಿಯ ಹಲವಾರು ಪ್ರಕರಣಗಳಲ್ಲಿ ಅತ್ಯಂತ ನ್ಯಾಯ ಬದ್ಧವಾಗಿ ಹಾಗೂ ಸಂವಿಧಾನ ಬದ್ದವಾಗಿ ಅವರು ನೀಡಿರುವ ನೂರಾರು ತೀರ್ಪುಗಳು ಮುಂದಿನ ಹಲವು ಕಾಲ ಭಾರತೀಯ ನ್ಯಾಯವ್ಯವಸ್ತೆಗೆ ದಾರಿ ದೀಪವಾಗಲಿದೆ.
ಕರ್ನಾಟಕ ಹಾಗೂ ಕನ್ನಡ ಕರಾವಳಿಯ ನ್ಯಾಯಾಲಯಗಳ ಮೂಲ ಸೌಕರ್ಯ ಅಭಿವೃದ್ದಿ, ಬ್ರಹತ್ ನೂತನ ಮತ್ತು ಅತ್ಯಂತ ಸುಸಜ್ಜಿತ ನ್ಯಾಯಾಂಗ ಕಟ್ಟಡಗಳ ನಿರ್ಮಾಣ, ವಕೀಲರ ಸಂಘಗಳ ಕಟ್ಟಡ ನಿರ್ಮಾಣ, ಯುವ ವಕೀಲರ ಕಲ್ಯಾಣ, ನ್ಯಾಯಾಂಗ ಸಿಬ್ಬಂದಿಗಳ ಯಶೋಭಿವ್ರದ್ದಿ ಈ ಮೊದಲಾದ ಕಾರ್ಯಗಳಲ್ಲಿ ಅತ್ಯಂತ ಕಾಳಜಿ ವಹಿಸಿ ಕಾರ್ಯನಿರ್ವಸಿದ್ದನ್ನು ಎಂ ಕೆ ವಿಜಯ್ ಕುಮಾರ್ ಸ್ಮರಿಸಿ ಅಭಿನಂದಿಸಿ ಪ್ರಶಂಸಿದರು.
ರಾಜ್ಯಪಾಲರಾಗಿಯೂ ತಾವು ನ್ಯಾಯಬದ್ದವಾಗಿ ಮತ್ತು ಸಂವಿಧಾನಬದ್ದರಾಗಿ ಕಾರ್ಯನಿರ್ವಸುತ್ತೀರಿ ಎನ್ನುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದಿನಂತೆ ರಾಷ್ಟ್ರ ಧರ್ಮ ಪಾಲನೆ ಹಾಗೂ ಜನಕಲ್ಯಾಣ ಕಾರ್ಯಗಳಲ್ಲಿ ಸದಾ ತೊಡಗಿ ಯಶಸ್ಸನ್ನು ಸಾಧಿಸಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ನಿವ್ರತ್ತ ನ್ಯಾಯಮೂರ್ತಿ ಬಿಹಾರದ ಪೂರ್ವ ರಾಜ್ಯಪಾಲ ದಿ ರಾಮಾ ಜೋಯಸ್ ಅವರ ಬ್ರಹತ್ ಕ್ರತಿಗಳಾದ 'Dharma and Global ethics' ಮತ್ತು 'Legal and constitutional history of India' ಎನ್ನುವ ಪುಸ್ತಕಗಳನ್ನು ನ್ಯಾಯಮೂರ್ತಿ ಅಬ್ದುಲ್ ನಝಿರ್ ರವರಿಗೆ ನೀಡಿದರು.
ಕಾರ್ಕಳ ವಕೀಲರ ಸಂಘದ ಅದ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಮೂಡಬಿದಿರೆ ವಕೀಲರ ಸಂಘದ ಅದ್ಯಕ್ಷ ಎಂ.ಕೆ ವಿಜೇಂದ್ರ ಕುಮಾರ್, ನ್ಯಾಯವಾದಿಗಳಾದ ಎಂ.ಕೆ ಸುವ್ರತ್ ಕುಮಾರ್ , ಮುರಲೀದರ್ ಭಟ್, ಎಂ.ಕೆ ವಿಪುಲ್ ತೇಜ್, ಪದ್ಮಪ್ರಸಾದ್ ಜೈನ್, ಶ್ವೇತಾ ವಿಪುಲ್, ಪರೀತೋಷ್, ಇತಿಹಾಸ್, ಎಂ.ಕೆ ವಿದಿತ್ ಉಪಸ್ಥಿತರಿದ್ದರು.