ಕಾಸರಗೋಡು, ಫೆ 18 (DaijiworldNews/HR): ಪೈವಳಿಕೆ ಸರಕಾರಿ ಶಾಲೆಯಲ್ಲಿ ರ್ಯಾಗಿಂಗ್ ಪ್ರಕರಣವೊಂದು ನಡೆದಿದ್ದು, ಪ್ಲಸ್ ಟು ವಿದ್ಯಾರ್ಥಿ ಮೇಲೆ 15 ರಷ್ಟು ವಿದ್ಯಾರ್ಥಿಗಳು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.
ವಿದ್ಯಾರ್ಥಿಗೆ ಕಲ್ಲಿನಿಂದ ತಲೆ ಮತ್ತು ಹಣೆಗೆ ಹಲ್ಲೆ ಜಜ್ಜಲಾಗಿದೆ. ಇದಲ್ಲದೆ ಬೆಳ್ಳುಳ್ಳಿಯ ಸ್ಪ್ರೇಯನ್ನು ಕಣ್ಣಿಗೆ ಸ್ಪ್ರೇ ಮಾಡಲಾಗಿದೆ. ಬಳಿಕ ಥಳಿಸಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ. ಎಚ್ .ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ರ್ಯಾಗಿಂಗ್ ಗೆ ಒಳಗಾದವನು.
ಇನ್ನು ಶುಕ್ರವಾರ ಮಧ್ಯಾಹ್ನ ತರಗತಿ ಕಳೆದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ಲಸ್ ಟು ತರಗತಿಯ ಇನ್ನೊಂದು ಬ್ಯಾಚ್ ನ ವಿದ್ಯಾರ್ಥಿಗಳ ತಂಡವೊಂದು್ ಈ ಕೃತ್ಯ ನಡೆಸಿದೆ.
ಬೊಬ್ಬೆ ಕೇಳಿ ಸಮೀಪ ವಾಸಿಗಳು ದಾವಿಸಿ ಬಂದಾಗ ವಿದ್ಯಾರ್ಥಿ ಗಳ ತಂಡವು ಪರಾರಿಯಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು.