ಮಂಗಳೂರು, , ಫೆ 18 (DaijiworldNews/HR): ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್)ನಿಂದ ರಕ್ಷಿಸಿದ ಮಕ್ಕಳನ್ನು ಪತ್ತೆಹಚ್ಚಲು ಭಾರತೀಯ ರೈಲ್ವೇಯು 'ಟ್ರ್ಯಾಕ್ ಚೈಲ್ಡ್ ಪೋರ್ಟಲ್- 3.0' ಅನ್ನು ಪ್ರಾರಂಭಿಸಿದೆ.
ಆರ್ಪಿಎಫ್ ಈಗ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ಟ್ರ್ಯಾಕ್ ಚೈಲ್ಡ್ ಪೋರ್ಟಲ್ನಲ್ಲಿ ರಕ್ಷಿಸಲ್ಪಟ್ಟ ಮಕ್ಕಳ ವಿವರಗಳನ್ನು ಅಪ್ಲೋಡ್ ಮಾಡುತ್ತಿದ್ದು, https://indianrailways.gov.in/. ಕಾಣೆಯಾದ ಮಕ್ಕಳ ಕುಟುಂಬ ಸದಸ್ಯರು ಅಥವಾ ಸಾರ್ವಜನಿಕರು ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳನ್ನು ಪತ್ತೆಹಚ್ಚಲು ಪೋರ್ಟಲ್ನಲ್ಲಿ ಲಭ್ಯವಿರುವ ಡೇಟಾದಲ್ಲಿ ಪರೀಕ್ಷಿಸಬಹುದು.
ರೈಲ್ವೆ ನಿಲ್ದಾಣಗಳು, ರೈಲುಗಳು ಮತ್ತು ಇತರ ರೈಲ್ವೆ ಆವರಣಗಳಲ್ಲಿ ಕಾಣೆಯಾದ ಮಕ್ಕಳನ್ನು ಆರ್ಪಿಎಫ್ ರಕ್ಷಿಸುತ್ತಿದೆ. 'ಟ್ರ್ಯಾಕ್ ಚೈಲ್ಡ್ ಪೋರ್ಟಲ್ - 3.0' ಭಾರತೀಯ ರೈಲ್ವೇಸ್ ಕೈಗೊಂಡ ಉಪಕ್ರಮವಾಗಿದ್ದು, ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಇನ್ನು ಕಳೆದುಹೋದ ಮಕ್ಕಳ ಬಗ್ಗೆ ಮಾಹಿತಿಯನ್ನು ಒದಗಿಸಲು ಪೋರ್ಟಲ್ ಸಾರ್ವಜನಿಕರಿಗೆ ಅವಕಾಶ ನೀಡುತ್ತದೆ.
ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಿಂದ ರಕ್ಷಿಸಲ್ಪಟ್ಟ ಮಕ್ಕಳನ್ನು ಪತ್ತೆಹಚ್ಚಲು ವೆಬ್ ಪೋರ್ಟಲ್ ಅನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಇನ್ಸ್ಪೆಕ್ಟರ್ ಆರ್ಪಿಎಫ್ ಅಕ್ಬರ್ ಅಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.