ಮಂಗಳೂರು, ಫೆ 17 (DaijiworldNews/MS): ಹಾಡಹಗಲೇ ನಗರದ ಜ್ಯುವೆಲ್ಲರಿ ಶಾಪ್ ನುಗ್ಗಿ ಜ್ಯುವೆಲ್ಲರಿ ನೌಕರನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣ ನಡೆದು ಎರಡು ವಾರಗಳು ಕಳೆದರೂ ಆರೋಪಿಯ ಪತ್ತೆಯಾಗಿಲ್ಲ.
ಮಾಲೀಕ ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಆಭರಣ ಮಳಿಗೆಗೆ ನುಗ್ಗಿದ್ದ ದುಷ್ಕರ್ಮಿ, ಸಿಬ್ಬಂದಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (54) ಎಂಬವರನ್ನು ಇರಿದು ಕೊಂದು ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದ.
ಆರೋಪಿಯ ಸುಳಿವು ಸಿಗದ ಹಿನ್ನಲೆಯಲ್ಲಿ ಸಿಸಿ ಟಿವಿಯಲ್ಲಿ ದಾಖಲಾದ ಭಾವಚಿತ್ರವನ್ನು ಬಿಡುಗಡೆ ಮಾಡಿ ಮಾಹಿತಿ ದೊರೆತಲ್ಲಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದರು.
ಇನ್ನೊಂದೆಡೆ ಪೊಲೀಸರು ಆರೋಪಿಯ ಪತ್ತೆಗೆ ಕಾಸರಗೋಡಿನಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.