ಕಾರ್ಕಳ, ಫೆ 17 (DaijiworldNews/HR): ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ನಿಯಾಮಾವಳಿಯಂತೆ ಸ್ವರ್ಧೆಗೆ ಅರ್ಜಿ ಸಲ್ಲಿಸಿದ ಅಕಾಂಕ್ಷಿಗಳನ್ನು ಹೊರತು ಪಡಿಸಿ ಐದನೇ ವ್ಯಕ್ತಿಗೆ ಟಿಕೇಟ್ ನೀಡುವ ಯಾವುದೇ ಪ್ರಸ್ತಾಪ ಪಕ್ಷದಲ್ಲಿ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರಕೋಟೆಯನ್ನಾಘಿ ಪರಿವರ್ತಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ಅಭ್ಯರ್ಥಿ ಪೈಕಿ ಅರ್ಜಿದಾರರಾದ ನೀರೆ ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ ಮುದ್ರಾಡಿ, ಡಿ ಆರ್ ರಾಜು, ಸುರೇಂದ್ರ ಶೆಟ್ಟಿ ಜಂಟೀಯಾಗಿ ಪುನರುಚ್ಚರಿಸಿದ್ದಾರೆ.
ನಗರದ ಹೋಟೆಲ್ ಕಟೀಲ್ ಇಂಟರ್ ನ್ಯಾಶನಲ್ ಹೋಟೆಲ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಗುಂಪುಗಾರಿಕೆ, ಗೊಂದಲವಿಲ್ಲ. ಬಿಜೆಪಿಯ ಪ್ರಾಯೋಜಕತ್ವದಲ್ಲಿ ಈ ಎಲ್ಲ ವಿವಾದಗಳು ಕಪೋಲಕಲ್ಪಿತವಾಗಿದೆ ಸೃಷ್ಠಿಯಾಗುತ್ತಿರುವುದು ವಿಷಾದನೀಯವೆಂದರು.
ರಾಜಕೀಯ ಲಾಭಕ್ಕಾಗಿ ಧರ್ಮ, ಭಾಷೆ, ಜನಾಂಗೀಯವನ್ನು ಎದುರಾಕುತ್ತಾ ಜೀವದೊಂದಿಗೆ ಚೆಲ್ಲಾಟವಾಡುವು ಪ್ರವೃತ್ತಿಯಿಂದ ಬಿಜೆಪಿಗರು ಹಿಂಜರಿಯಬೇಕು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಸಾಮಾಜಿಕ ಜಾಗಳಲ್ಲಿ ಗೊಂದಲ ಹೇಳಿಕೆ ನೀಡುತ್ತಿರುವ ಬಿಜೆಪಿಗರ ದಾಸ್ಯ ಸಂಸ್ಕೃತಿ ಕೊನೆಗಾಣಲಿ ಎಂದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವಲ್ಲಿ ಮಾಜಿ ಮುಖ್ಯಮಂತ್ರಿ ಎ.ವೀರಪ್ಪ ಮೊಯಿಲಿಯೇ ಸುಪ್ರೀಂ ಆಗಿದ್ದಾರೆ ಎಂದರು.
ಕಾರ್ಕಳ ತಾಲೂಕು ಮೊದಲು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು ಅದನ್ನು ಮರಳಿ ತರಲಿದ್ದೇವೆ. ಬಿಜೆಪಿ ಪಕ್ಷ ಐದನೆ ವ್ಯಕ್ತಿಯನ್ನು ಟಿಕೆಟ್ ನೀಡುವ ಬಗ್ಗರ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಬಗ್ಗೆ ವೀರಪ್ಪ ಮೊಯ್ಲಿ ಭರವಸೆ ನೀಡಿದ್ದಾರೆ. ಒಂದು ವಾರದಲ್ಲಿ ಟಿಕೆಟ್ ನೀಡುವ ಬಗ್ಗೆ ಅಭ್ಯರ್ಥಿಯ ಘೋಷಣೆ ಅಂತಿಮವಾಗಲಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಹೇಳಿದರು.
ಕೆಪಿಸಿಸಿ ಸದಸ್ಯ ಕಾಂಗ್ರೇಸ್ ಪಕ್ಷದ ಟಿಕೆಟ್ ಅಕಾಂಕ್ಷಿ ಸುರೇಂದ್ರ ಶೆಟ್ಟಿ ಮಾತನಾಡಿ, ಬಿಜೆಪಿ ಪಕ್ಷದ ಸದಸ್ಯರು ಕಾಂಗ್ರೆಸ್ ನಲ್ಲಿ ಅಸ್ಥಿರ ಗೊಳಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಐದನೆ ಅಭ್ಯರ್ಥಿ ಆಯ್ಕೆ ಮಾಡಿಯೇ ಇಲ್ಲಾ! ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡಿ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದರು
ಉದ್ಯಮಿ ಹಾಗೂ ಟಿಕೆಟ್ ಅಕಾಂಕ್ಷಿ ಡಿ ಅರ್ ರಾಜು ಮಾತನಾಡಿ ಪಕ್ಷ ಸಿದ್ದಾಂತದ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚಾರಕ್ಕೆ ಇಳಿದಿದ್ದೇವೆ. ನಾವೆಲ್ಲರು ಟಿಕೆಟ್ ಅಕಾಂಕ್ಷಿಗಳು ನಿಜ ಆದರೆ ಮೊಯ್ಲಿಯವರು ಐದನೇ ವ್ಯಕ್ತಿ ಗೆ ಟಿಕೆಟ್ ನೀಡುವುದನ್ನು ಅಲ್ಲಗಳೆದಿದ್ದಾರೆ. ಕೇವಲ ಊಹಾ ಪೋಹಗಳಷ್ಟೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ನಾವು ನಾಲ್ಕು ಮಂದಿ ಅಭ್ಯರ್ಥಿ ಗಳು ವೀರಪ್ಪ ಮೊಯ್ಲಿ ಹಾಗೂ ಗೋಪಾಲ್ ಭಂಡಾರಿ ಯವರ ಶಿಷ್ಯ ರಾಗಿದ್ದವರು ಹಾಗಾಗಿ ಪಕ್ಷ ಸಂಘಟನೆ ಗೆ ಒತ್ತು ಕೊಟ್ಟು ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೇಸ್ ಪಕ್ಷ ಜನರಿಗೆ ಮೂಲಸೌಕರ್ಯಗಳನ್ನು ಹಾಗೂ ಬದುಕನ್ನು ಕಟ್ಟಿಕೊಟ್ಟ ಪಕ್ಷವಾಗಿದೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಒಗ್ಗಟ್ಟೆ ನಮಗೆ ಶ್ರೀರಕ್ಷೆಯಾಗಿದೆ ಎಂದರು
ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್ ಇನ್ನಾ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ, ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಉಪಸ್ಥಿತರಿದ್ದರು.