ಕಾರ್ಕಳ, ಫೆ 16 (DaijiworldNews/MS): ಐತಿಹಾಸಿಕ ಹಿನ್ನಲೆಯುಳ್ಳ ಬೆಳ್ತಂಗಡಿ ತಾಲೂಕಿನ ನರಸಿಂಹಗಢ ಯಾ ಜಮಲಾಬಾದ್ ಕೋಟೆ, ಸ್ಥಳೀಯವಾಗಿ ಕರೆಯಲ್ಪಡುವ ಗಡಾಯಿ ಕಲ್ಲನ್ನು ವಿಶಿಷ್ಟ ರೀತಿಯಲ್ಲಿ ಏರಿದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ನೋಡುಗರನ್ನು ನಿಬ್ಬೇರಗಾಗುವಂತೆ ಮಾಡಿದರು.
ಗಡಾಯಿ ಕಲ್ಲಿನ ಎತ್ತರ 1700 ಅಡಿ. ತನ್ನ ಸಾಹಸಗಾಥೆ ಮೆರದಿದ್ದ ಕೋತಿ ರಾಜ್ ಬುಧವಾರದಂದು ಕರಿಯಕಲ್ಲಿನ ನಾಡೆಂದು ಜನಜನಿತಗೊಂಡಿರುವ ಕಾರ್ಕಳಕ್ಕೆ ಅಗಮಿಸಿದ್ದರು.
ನಗರದ ಸಾಲ್ಮರದಲ್ಲಿ ಹಲವು ವರ್ಷಗಳ ಹಿಂದೆ ಕಾಮಗಾರಿ ಮೊಟಕುಗೊಂಡಿದ್ದ 130 ಅಡಿ ಎತ್ತರದ ಸಮೃದ್ದಿ ಹಿಲ್ಸ್ ಕಟ್ಟಡವನ್ನು ಏರಿ ನಾಡ ಧ್ವಜವನ್ನು ಹಾರಿಸಿ ಸಾಹಸಗಾಥೆ ಮೆರೆದರು.
9 ಜನ ಸದಸ್ಯರೊಳಗೊಂಡ ಕೋತಿರಾಜ್ ತನ್ನ ಸಾಹಸಗಾಥೆಯನ್ನು ರಾಜ್ಯದಾದ್ಯಂತ ಪ್ರತಿ ತಾಲೂಕಿನಲ್ಲಿ ಆಯೋಜಿಸುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ಐತಿಹಾಸಿಕ ಎತ್ತರ ಪ್ರದೇಶ ಗಳನ್ನು , ಹಳೆ ಹಾಗೂ ಹೊಸ ಕಟ್ಟಡಗಳು ಎಂಬುವುದು ಗಮನಾರ್ಹ.
ತನ್ನ ಸಾಹಸಗಾಥೆ ಮೆರೆಯುವುವ ಮೂಲಕ ನೋಡುಗರನ್ನು ನಿಬ್ಬೇರುವಂತೆ ಮಾಡುವ ಅವರು, ಕ್ಷಣಮಾತ್ರದಲ್ಲಿ ಎತ್ತರಕ್ಕೆ ಏರುತ್ತಾರೆ.
ಕೋಟೆನಾಡು ಚಿತ್ರದುರ್ಗದ ಪವನ್ ಜೋಸ್, ಬಸವರಾಜ್ , ಲಿಂಗರಾಜ್, ಮದನ್ , ಪವನ್ ಕುಮಾರ್ ,ಅಭಿ ನವೀನ ,ರಾಜಶೇಖರ ಮೊದಲಾದವರು ಕೋತಿರಾಜ್ ತಂಡದಲ್ಲಿ ಇರುವವರು. ಪವನ್ ಜೋಸ್ ವಕೀಲರಾಗಿ ವೃತ್ತಿ ಸಲ್ಲಿಸುತಿದ್ದು , ಬಸವರಾಜ್ ಉದ್ಯಮವನ್ನು ನಡೆಸುತಿದ್ದಾರೆ.
ಪ್ರತಿಷ್ಠಿತ ಹೋಟೇಲ್ ನಲ್ಲಿ ಲಿಂಗರಾಜ್ ,ರಾಜಶೇಖರ್ ಶೆಪ್ ಆಗಿ ಸೇವೆ ಸಲ್ಲಿಸುತಿದ್ದಾರೆ . ಕ್ಲೈಂಬಿಂಗ್ ನಲ್ಲಿ ರಾಷ್ಟ್ರೀಯ ಸ್ವರ್ಣ ಪದಕಗಳನ್ನು ಪಡೆದಿರುವ ನಾಲ್ವರು ವಿದ್ಯಾರ್ಥಿಗಳಾದ ಮದನ್ , ಪವನ್ ,ಅಭಿ, ನವೀನ್ ಚಿತ್ರದುರ್ಗದಲ್ಲಿ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತಿದ್ದಾರೆ .ಎಲ್ಲರೂ ಕೋತಿರಾಜ್ ಗರಡಿಯಲ್ಲಿ ಪಳಗಿಕೊಂಡು ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದಾರೆ
ಸಾಹಸ ಪ್ರದರ್ಶನಕ್ಕೆ ಕಾರಣ :
ಒಲಿಂಪಿಕ್ಸ್ ನಲ್ಲಿ ಅಯ್ಕೆಯಾಗಿರುವ ವಾಲ್ ಕ್ಲೈಂಬಿಂಗ್ ಸ್ಪರ್ಧೆಗೆ ಸ್ಪರ್ಧಿಸುವ ವಿದ್ಯಾರ್ಥಿಗಳು ಕ್ರೀಡಾಳುಗಳಿಗೆ ತರಬೇತಿ ನೀಡುವ ಸಲುವಾಗಿ ಅಡ್ವೆಂಚರ್ ಮಂಕಿ ಕ್ಲಬ್ ಸಂಸ್ಥೆ ಸ್ಥಾಪಿಸಿದ್ದಾರೆ . ಅದಕ್ಕಾಗಿ ಧನ ಸಂಗ್ರಹ ಮಾಡುವ ಸಲುವಾಗಿ ಕರ್ನಾಟಕದಾದ್ಯಂತ ವಾಲ್ ಕ್ಲೈಂಬಿಂಗ್ ಪ್ರದರ್ಶನ ನೀಡುತಿದ್ದಾರೆ.
ರಾಜ್ಯದಾದ್ಯಂತ ರಕ್ಷಣೆಗೆ ಸಿದ್ದ ಈ ತಂಡ : ಕೋಟೆನಾಡಿನ ಕೋತಿರಾಜ್ 9 ಜನರ ತಂಡವು ಅನಮಟ್ಟಿ ಕೆರೆ ಕ್ಕೋಡಿ ಒಡೆದ ಸಂದರ್ಭದಲ್ಲಿ ಅಪಾಯದಲ್ಲಿ ಸಿಲುಕಿದ ಜನರ ರಕ್ಷಣೆ ಹಾಗೂ ಜೋಗ ಜಲಪಾತದಂತ, ನಂದಿ ಬೆಟ್ಟದ ಅಪಾಯದ ಹಿರಿದಾದ ಕಡಿದಾದ ಜಲಪಾತಗಳಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಸಲುವಾಗಿ ಈ ತಂಡವು ಸಾಥ್ ನೀಡುತ್ತಿದೆ .ರಾಜ್ಯದಾದ್ಯಂತ ವಿವಿಧೆಡೆಗಳಲ್ಲಿ ರಕ್ಷಣೆಗೆ ಈ ತಂಡವು ಧಾವಿಸುತ್ತಿದೆ.
ಇಲಾಖೆ ಅನುಮತಿಯೊಂದಿಗೆ ಸಾಹಸಗಾಥೆ! - ಕೋತಿರಾಜ್
"ನಾನು 85 ಕೆಜಿ ತೂಕವಿದ್ದು_ ಸಾಹಸ ಮಾಡುವುದು ದೊಡ್ಡದಲ್ಲ . ನನ್ನ ಪ್ರತಿಭೆಯನ್ನು ರಾಜ್ಯದಾದ್ಯಂತ ಪ್ರದರ್ಶಿಸಬೇಕು.ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲಿನ ಸಾಹಸವನ್ನು ಮುಗಿಸಿಕೊಂಡು ಎರಡನೆ ಪ್ರದರ್ಶನ ನೀಡಲು ಕಾರ್ಕಳ ತಾಲೂಕಿಗೆ ಆಗಮಿಸಿದ್ದೇನೆ . ಚಿತ್ರದುರ್ಗದ ಕೋಟೆಯೆ ತರಬೇತಿ ವಾಲ್ ಕೈಂಬಿಂಗ್ ಮಾಡಲು ಚಿತ್ರದುರ್ಗದ ಕೋಟೇಯೆ ಸ್ಪೂರ್ತಿ ಯಾಗಿದೆ. ಪೋಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸ್ಥಳೀಯಾಡಳಿತ ಹಾಗೂ ಕಟ್ಟಡ ಮಾಲೀಕರ ಅನುಮತಿ ಪಡೆದು ಪ್ರದರ್ಶನ ನೀಡುತಿದ್ದೇನೆ. ಜನರ ಸ್ಪಂದನೆ ಉತ್ತಮವಾಗಿದೆ".
ವರದಿ: ಆರ್.ಬಿ ಜಗದೀಶ್