ಮಂಗಳೂರು,ಫೆ 16 (DaijiworldNews/MS):ಫೆ. 15 ರಿಂದ ಫೆ.16ರ ರಾತ್ರಿ 8.30 ರವರೆಗೆ ಕಡಲಬ್ಬರ ಹೆಚ್ಚಾಗಲಿದೆ ಎಂದು ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಶೋಧನಾ ಕೇಂದ್ರ (ಐನ್ ಸಿಓಐಎಸ್)ಎಚ್ಚರಿಕೆ ನೀಡಿದೆ.
ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದ ಕೂಡಿರುವ ಸಾಧ್ಯತೆ ಇದೆ .ಆದುದರಿಂದ ಮೀನುಗಾರರು ಮತ್ತು ಕಿನಾರೆಯ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಈ ಅವಧಿಯಲ್ಲಿ ಕಡಲಿನಲ್ಲಿ ಭಾರಿ ಗಾತ್ರದ ಅಲೆಗಳು ಉಂಟಾಗುವ ಸಾಧ್ಯತೆ ಇದೆ. ಕೇರಳ ಕಿನಾರೆಯಲ್ಲಿ ಎರಡು ಮೀಟರ್ ವರೆಗೆ ಮತ್ತು ಕರ್ನಾಟಕ ಕಿನಾರೆಯಲ್ಲಿ 1.8 ಮೀಟರ್ ಎತ್ತರದವರೆಗಿನ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ವೇಳೆ ಕಡಲ ಕೊರೆತ ಮತ್ತು ಸಮುದ್ರ ಅಬ್ಬರದಿಂದ ಅನಾಹುತವಾಗುವ ಸಾಧ್ಯತೆಯಿದ್ದು ಸಮುದ್ರ ಕಿನಾರೆಯಲ್ಲಿ ವಾಸಿಸುವ ಮನೆಯವರು ಕರಾವಳಿಯಿಂದ ತಾತ್ಕಾಲಿಕ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿದೆ.