ಉಡುಪಿ, ಫೆ 15 (DaijiworldNews/MS): ವೈಯಕ್ತಿಕ ಕಾರಣದಿಂದ ಮನನೊಂದು ಕೊಡಗು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ಘಟನೆ ವರದಿಯಾಗಿದೆ.
ಮೃತರನ್ನು ಮಣಿಪಾಲದ ಫ್ಲ್ಯಾಟ್ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದ ಕೊಡಗು ಮೂಲದ ಗೌರಿ (70) ಎಂದು ಗುರುತಿಸಲಾಗಿದೆ.
ಇವರು ಫೆ.13ರ ಸಂಜೆ ಸುಮಾರು 4 ಗಂಟೆಗೆ ತಾವು ಕೆಲಸ ಮಾಡುವ ಮನೆಯಿಂದ ಹೋಗಿ ಫೆ.14ರಂದು ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದಿದ್ದರು. ಮೃತರ ನಾಲ್ಕು ಮಕ್ಕಳಲ್ಲಿ ಮೊದಲನೇ ಮಗ ಮತ್ತು ಎರಡನೇ ಮಗಳು ರಾಜಮ್ಮ ಹಾಗೂ ಅವರ ಗಂಡ ಈಗಾಗಲೇ ಮರಣ ಹೊಂದಿದ್ದು, ಮೃತರಿಗೆ ಯಾವುದೇ ಸ್ವಂತ ಮನೆ ಇಲ್ಲದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು.
ಫೆ. 14ರಂದು ಅವರು ಕೆಲಸ ಮಾಡುವ ಮನೆಯ ಮೇಲಿನ ಟೇರಸ್ನ ಕಬ್ಬಣದ ಕೊಂಡಿಗೆ ನೈಲನ್ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಅನಂತರ ಸೀರೆ ತುಂಡಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821