ಕಾಸರಗೋಡು, ಫೆ. 14 (DaijiworldNews/SM): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ಗೊಳಿಸು ತ್ತಿದ್ದಾಗ ಮುಂಭಾಗ ಕುಸಿದು ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ನಗರ ಹೊರ ವಲಯದ ನುಳ್ಳಿ ಪ್ಪಾ ಡಿ ಯಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಭಾರೀ ಅಪಾಯ ತಪ್ಪಿದೆ. ಹೊಸ ಬಸ್ಸು ನಿಲ್ದಾಣ ದಿಂದ ನುಳ್ಳಿಪ್ಪಾಡಿ ತನಕದ ಹೈಟೆನ್ಷನ್ ಸೇರಿದಂತೆ ಹಲವಾರು ಕಂಬಗಳು ಮುರಿದಿದೆ. ಮಸೀದಿ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದಂತೆ ಒಂದು ಭಾಗ ಕುಸಿದು ಸಮೀಪ ದಲ್ಲಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿದೆ.
ಈ ಸಂದರ್ಭದಲ್ಲಿ ಹಲವಾರು ವಾಹನ ಗಳು ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವು. ಇದಲ್ಲದೆ ನೂರಾರು ಮಂದಿ ತೆರವು ಕಾರ್ಯ ನೋಡಲು ಸೇರಿದ್ದ ರು ಆದರೆ ಅದೃಷ್ಟ ವ ಶಾತ್ ಭಾರೀ ದುರಂತ ತಪ್ಪಿದೆ ಎನ್ನ ಬಹುದು
ಸಂಜೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ಬಳಿಕ ಕಾಸರಗೋಡು - ಚೆ ರ್ಕಳ ನಡುವೆ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ಅಗ್ನಿ ಶಾಮಕ ದಳ, ಕೆ ಎಸ್ ಇ ಬಿ ಅಧಿಕಾರಿಗಳು ಸ್ಥಳ ಕ್ಕೆ ತಲಪಿ ತೆರವು ಕಾರ್ಯ ನಡೆಸಿದ್ದು, ಬಳಿಕ ಸಂಚಾರಕ್ಕೆ ಅನು ವು ಮಾಡಿ ಕೊಡಲಾಯಿತು. ಹತ್ತಕ್ಕೂ ಅಧಿಕ ಕಂಬಗಳು ನೆಲಕಚ್ಚಿವೆ. ನಗರ ದಲ್ಲಿ ವಿದ್ಯುತ್ ಸಂಪರ್ಕ ಕಡಿತ ಗೊಂಡಿದೆ.