ಕಾಸರಗೋಡು, ಫೆ. 12 (DaijiworldNews/SM): ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ಧ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿ ಯ ಸಾವಿಗೆ ಇಲಿ ವಿಷ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿ ಯಿಂದ ತಿಳಿದು ಬಂದಿದೆ.
ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಇದನ್ನು ದ್ರಡಿ ಕರಿಸಿತ್ತು. ಜನವರಿ ಏಳರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು. ಕೋಜೀಕ್ಕೊಡ್ ನ ಫಾರೆನ್ಸಿ ಕ್ ಪ್ರಯೋಗಾಲಯ ದಲ್ಲಿ ನಡೆಸಿದ ತಪಾಸಣೆ ಯಿಂದ ಇಲಿ ವಿಷ ಸೇವನೆ ಅಂಜು ಶ್ರೀ ಯ ಸಾವಿಗೆ ಕಾರಣ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ. ಮನೆಯಲ್ಲಿ ನಡೆಸಿದ ತಪಾಸಣೆ ಯಿಂದ ಆತ್ಮಹತ್ಯೆ ಪತ್ರ ವು ಪೊಲೀಸರಿಗೆ ಲಭಿಸಿತ್ತು.
ಕಾಸರಗೋಡು ನಗರ ಹೊರ ವಲಯದ ಹೋಟೆಲೊಂದ ರಿಂದ ಖರೀದಿಸಿದ್ದ ಆಹಾರ ಸೇವಿಸಿದ್ದ ರಿಂದ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ಪೊಲೀಸರು ಕ್ರಮ ತೆಗೆದು ಕೊಂಡಿದ್ದರು.
ಆದರೆ ತನಿಖೆ ಯಿಂದ ಆಹಾರದಿಂದ ಸಾವು ಸಂಭವಿ ಸಿಲ್ಲ ಎಂದು ದೃಢ ಪಟ್ಟಿತ್ತು.
ಯಾವುದೋ ವಿಷ ದೇಹದೊಳಗೆ ಸೇರಿ ಸಾವು ಸಂಭವಿ ಸಿರುವುದಾಗಿ ಮರಣೋತ್ತರ ಪರೀಕ್ಷೆ ಯಿಂದ ತಿಳಿದು ಬಂದಿತ್ತು. ಇದರಿಂದ ಅಂಜು ಶ್ರೀ ಯ ಆಂತರಿಕ ಅವಯವ ಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು.