ಮಂಗಳೂರು, ಫೆ 13 ( DaijiworldNews/MS): ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಫೆ. 11ರಂದು ಪೂರ್ವ ಪ್ರಾರ್ಥಮಿಕ ಶಾಲೆಯಿಂದ 2ನೇ ತರಗತಿಯವರೆಗಿನ ಮಕ್ಕಳಿಗಾಗಿ `ಔರಾ’ - ಮಕ್ಕಳ ಬಾಲ್ಯ ಉತ್ಸವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಕ್ಕಳು ಈ ವರ್ಷದ ಶಾಲಾ ಅವಧಿಯಲ್ಲಿ ಕಲಿತ ವಿಷಯದ ಆಧಾರದ ಮೇಲೆ ಹೆತ್ತವರ ಸಮ್ಮುಖದಲ್ಲಿ ತಮ್ಮ ಪ್ರತಿಭೆಗಳನ್ನು ವಿಭಿನ್ನ ಕಾರ್ಯಕ್ರಮಗಳ ಮೂಲಕ ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿಯಾಗಿ `ಯು ಮ್ಯಾಟರ್ ಸಮಾಲೋಚನಾ ಮತ್ತು ತರಬೇತಿ ಕೇಂದ್ರದ ನಿರ್ದೇಶಕಿ ಶ್ರೀಮತಿ ಲುಜೀನಾರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಗಾಟಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಸಲ್ಧಾನಾ, ಮುಖ್ಯ ಆಡಳಿತ ನಿರ್ವಾಹಕ ವ್ಯವಸ್ಥಾಪಕಿ ಶ್ರೀಮತಿ ಪ್ರತಿಭಾ ಚೇತನ್, ಪ್ರೆಸಿಡೆನ್ಸಿ ಶಾಲಾ ಆಡಳಿತ ವರ್ಗದ ಸಂಯೋಜಕರಾದ ಶ್ರೀ ಜಾವೇದ್ ಲತೀಫ್ ಹಾಗೂ ಶ್ರೀಮತಿ ಆಯಿಷಾ ಇಲ್ಲಾಹಾಮ್ ಮತ್ತು ಶ್ರೀಮತಿ ಸುಮನ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಲುಜಿನಾರವರು ತಮ್ಮ ಭಾಷಣದಲ್ಲಿ ಪ್ರೆಸಿಡೆನ್ಸಿ ಶಾಲೆಯು ಮಗುವಿಗೆ ಎರಡನೇಯ ಮನೆಯಾಗಿದ್ದು ಕೇವಲ ಶೈಕ್ಷಣಿಕ ಮಾತ್ರವಲ್ಲದೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ನೆರೆದವರನ್ನು ಉದ್ದೇಶಿಸಿ ಮಾತನಾಡಿದರು.
ಪೂರ್ವ ಪ್ರಾರ್ಥಮಿಕ ಶಾಲೆಯಿಂದ 2ನೇ ತರಗತಿಯವರೆಗಿನ ಮಕ್ಕಳು ತಮ್ಮ ನೃತ್ಯ , ಸಂಗೀತ, ನಾಟಕ ಹಾಗೂ ವಾಕ್ಚಾತುರ್ಯ ಗಳ ಮೂಲಕ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿದರು.
ಶ್ರೀಮತಿ ಡಯಾನಾ ಮ್ಯಾಕ್ಸಿ ಡ್ಲಿಮಾ ಅವರು ತಮ್ಮ ಭಾಷಣದಲ್ಲಿ ಮಕ್ಕಳ ಕಲಿಕೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಶ್ರೀಮತಿ ಶೈಲಾ ಸಲ್ಧಾನಾ ತಮ್ಮ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.