ವಿಟ್ಲ, ನ 3: ಕಳ್ಳತನ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಪ್ರಮುಖ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಪಡ್ನೂರು ಗ್ರಾಮದ ಟಿಪ್ಪು ನಗರ ನಿವಾಸಿ ರಾದಾಕಟ್ಟೆ ಬಶೀರ್ (37) ಬಂಧಿತ ಆರೋಪಿ. ಈತನನ್ನು ಪೋಲೀಸರು ಪುತ್ತೂರು ಸಮೀಪದ ಈಶ್ವರ ಮಂಗಿಲ ಕ್ರಾಸ್ ಬಳಿ ಬಂಧಿಸಿದ್ದು, ಬಶೀರ್ ವಿರುದ್ದ ಅತ್ಯಾಚಾರ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳಿವೆ.
ವಿಟ್ಲ ಪೋಲಿಸ್ ಠಾಣೆಯಲ್ಲಿ ಏಳು ವಾರೆಂಟ್ ಗಳಲ್ಲಿ ಪ್ರಮುಖ ಆರೋಪಿಯಾಗಿ ಬಶೀರ್ ತಲೆಮರೆಸಿಕೊಂಡಿದ್ದ. ಜಿಲ್ಲೆಯ ಒಟ್ಟು 19 ಪೋಲಿಸ್ ಠಾಣೆಗಳಲ್ಲಿ ವಾರೆಂಟ್ ಆರೋಪಿಯಾಗಿ ತಲೆಮರೆಸಿಕೊಂಡು ಪೋಲಿಸರಿಗೆ ತಲೆನೋವಾಗಿದ್ದ.
ಈತ ಮೋಬ್ಯಲ್ ಬಳಕೆ ಮಾಡುತ್ತಿರಲಿಲ್ಲ. ಮತ್ತು ಮನೆಯಲ್ಲಿ ಮಲಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಪೋಲಿಸರಿಗೆ ಈತನನ್ನು ಬಂಧಿಸಲು ಕಷ್ಟವಾಗುತ್ತಿತ್ತು. ಇಂದು ವಿಟ್ಲ ಠಾಣೆಯ ಉಪನಿರೀಕ್ಷಕ ನಾಗರಾಜ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.