ಉಡುಪಿ, ಫೆ. 12 (DaijiworldNews/SM):ರಾಷ್ಟೀಯ ಹೆದ್ದಾರಿ 66ರಲ್ಲಿ ಪುತ್ತೂರು ಜಂಕ್ಷನ್ ನ ಬಳಿ ಕಾರು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಜಖಂಗೊಡಿರುವ ಘಟನೆ ನಡೆದಿದೆ.
ಅಪಘಾತದ ರಭಸಕ್ಕೆ ರಾಷ್ಟೀಯ ಹೆದ್ದಾರಿ 66 ರ ಮಧ್ಯ ಡಿವೈಡರ್ ನಲ್ಲಿದ ಸೋಲಾರ್ ಬ್ಲಾಂಕರ್ ಕಂಬಕ್ಕೆ ಕೂಡಾ ಹಾನಿಯಾಗಿದೆ.
ಕರ್ಣನ್ ಎಂಬವರು ಟ್ಯಾಂಕರ್ ನಲ್ಲಿ ಎಲ್ಪಿಜಿ ಗ್ಯಾಸ್ ಲೋಡ್ ಮಾಡಿಕೊಂಡು ಮಂಗಳೂರು ಕಡೆಯಿಂದ ಗೋವಾಕ್ಕೆ ಸಾಗಿಸುತ್ತಿರುವಾಗ ಪುತ್ತೂರು ಗ್ರಾಮದ ನಿಟ್ಟೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅದೇ ದಿಕ್ಕಿನಿಂದ ಕರಾವಳಿ ಕಡೆಯಿಂದ ಅಂಬಾಗಿಲು ಕಡೆಗೆ ಬರುತ್ತಿದ್ದ ಕಾರಿನ ಚಾಲಕ ಬಿ. ತಂಬುರ ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿರುತ್ತದೆ . ಈ ಅಪಘಾತದಲ್ಲಿ ಯಾರಿಗು ಪೆಟ್ಟಾಗಿರುವುದಿಲ್ಲ. ಅದರೆ ಅಪಘಾತ ರಭಸಕ್ಕೆ ರಾಷ್ಟೀಯ ಹೆದ್ದಾರಿ 66 ರ ಮಧ್ಯ ಡಿವೈಡರ್ ನಲ್ಲಿದ ಸೋಲಾರ್ ಬ್ಲಾಂಕರ್ ಕಂಬಕ್ಕೆ ಹಾನಿಯಾಗಿರುತ್ತದೆ .ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.