ಕಾರ್ಕಳ, ಫೆ. 11 (DaijiworldNews/SM): ಮೇಘಾ ಲೋಕ್ ಅದಾಲತ್ ದಾಂಪತ್ಯ ಜೀವನದಲ್ಲಿ ವಿರಸಗೊಂಡ ದಂಪತಿಯ ಬಾಳಿಗೆ ದೀಪವಾಗಿ ಪರಿಣಮಿಸಿದೆ.
ಕಾರ್ಕಳ ನ್ಯಾಯಾಯದಲ್ಲಿ ಫೆಬ್ರವರಿ ೧೧ರಂದು ಮೇಫಾ ಲೋಕ್ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಳೆದ ಐದು ವರ್ಷಗಳಿಂದ ದಾಂಪತ್ಯ ಜೀವನದಿಂದ ಬೇರ್ಪಟ್ಟಿದ್ದ ದಂಪತಿಗಳು ಮತ್ತೇ ಒಂದಾಗಿ ಹರ್ಷ ವ್ಯಕ್ತ ಪಡಿಸಿ ನ್ಯಾಯಾಲಯದಿಂದ ಹೊರಟು ಹೋದ ಸಂತಸದ ಘಟನೆ ನಡೆದಿದೆ.
ಕಾರ್ಕಳ ತಾಲೂಕಿನ ಶ್ವೇತಾ ಎಂಬವರು ಬೆಂಗಳೂರಿನ ಕೋರಮಮಂಗಲದ ನಿವಾಸಿ ವೃತ್ತಿಯಲ್ಲಿ ಬಿಎಂಟಿಸಿ ಬಸ್ಸು ಚಾಲಕ ಧನ್ಶೇಖರ್ ಎಂಬವರೊAದಿಗೆ ೨೦೦೮ ಮೇ ೧೧ರಂದು ಹಿರಿಯಡ್ಕದ ಚಂದ್ರಯ್ಯ ಹೆಗ್ಡೆ ಸಭಾಭವನದಲ್ಲಿ ಸಪ್ತಪಥಿ ತುಳಿದರು.
ಬೆಂಗಳೂರಿನ ಕೋರಮಂಗಲದಲ್ಲಿ ದಾಂಪತ್ಯ ಜೀವನ ನಡೆಸುತ್ತಿದ್ದ ಅವರಿಬ್ಬರ ನಡುವೆ ವಿವಾಹವಾಗಿ ಐದು ವರ್ಷದ ಅಂತರದಲ್ಲಿ ಬಿರುಕು ಕಾಣತೊಡಗಿತ್ತು. ಆದರೂ ೨೦೧೮ರ ತನಕ ಜೊತೆಗಿದ್ದ ಅವರಿಗೆ ಓರ್ವ ಗಂಡು ಮಗುವು ಜನಿಸಿತು.
ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ೨೦೧೯ರಲ್ಲಿ ಅಜೆಕಾರಿನ ಶ್ವೇತಾ ಅವರು ಕಾರ್ಕಳದ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ದಾವೆ ಹೂಡಿದ್ದರು.
ಪ್ರಕರಣವು ವಿಚಾರಣೆಯ ಹಂತದಲ್ಲಿ ಇರುವಾಗಲೇ ಎರಡು ಕಡೆಯ ಪಾರ್ಟಿಯವರು ರಾಷ್ಟಿçÃಯ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಾರ್ಕಳ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೋಮಲ, ವಕೀಲೆ ಸುಶ್ಮಿತಾ ಪುರಣಿಕ ಇವರು ಸಂಧಾನಕಾರರಾಗಿಯೂ , ಪಾರ್ಟಿಯ ವಕೀಲರಾದ ಮಮತಾ, ಸಂಪತ್ ಕುಮಾರ್ ನಕ್ರೆ ಇವರ ಸಮಕ್ಷಮದಲ್ಲಿ ಪ್ರಕರಣದ ವಾದಿ ಹಾಗೂ ಪ್ರತಿವಾದಿಗಳಾಗಿದ್ದ ಶ್ವೇತಾ ಹಾಗೂ ಧನ್ ಶೇಖರ್ ಬಾಳು ಬೆಳಗಿದೆ.
ರಾಷ್ಟಿçÃಯ ಜನತಾ ನ್ಯಾಯಾಲಯವು ನಮ್ಮ ಬಾಳಿಗೆ ಹರ್ಷವನ್ನು ಉಂಟು ಮಾಡಿದೆ ಎಂದು ಸಂತೋಷ ವ್ಯಕ್ತಪಡಿಸಿದ ದಂಪತಿಗಳು ಒಬ್ಬರನ್ನೊಬ್ಬರು ಆರ್ಥೈಸಿಕೊಂಡು ಉತ್ತಮ ರೀತಿಯಲ್ಲಿ ಸಂಸಾರ ನಡೆಸುವ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದರು.