ಉಡುಪಿ, ಫೆ 11 (DaijiworldNews/HR): ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನದ ಗೋಷ್ಟಿ ಉದ್ಘಾಟನೆಗೆ ರೋಹಿತ್ ಚಕ್ರತೀರ್ಥ ಆಗಮಿಸಿದ್ದು, ಇದಕ್ಕೆ ಬಿಲ್ಲವ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಮ್ಮೇಳನ ನಡೆಯುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಲು ಬಿಲ್ಲವ ಮುಖಂಡರು ಯತ್ನಿಸಿದ್ದು, ಸ್ಥಳದಲ್ಲಿ ಪೋಲಿಸರಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಸಮ್ಮೇಳನದ ಮೈದಾನದಿಂದ 150 ಮೀಟರ್ ದೂರದಲ್ಲಿಯೇ ಪ್ರತಿಭಟನಾಕಾರರನ್ನು ಪೋಲಿಸರು ತಡೆದಿದ್ದು, ಪ್ರತಿಭಟನಾಕಾರರು ರೋಹಿತ್ ಚಕ್ರತೀರ್ಥ ವಿರುದ್ದ ತೀವ್ರವಾಗಿ ಘೋಷಣೆ ಕೂಗಿದ್ದಾರೆ.
ರೋಹಿತ್ ಚಕ್ರತೀರ್ಥ ನಾರಾಯಣ ಗುರುಗಳಿಗೆ ಅಗೌರವ ತೋರಿದ್ದು, 10ನೇ ತರಗತಿ ಪಠ್ಯ ಪುಸ್ತಕದಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಾಠವನ್ನು ಕೈ ಬಿಡಲಾಗಿದೆ ಎಂದು ಬಿಲ್ಲವ ಸಮುದಾಯದ ಆರೋಪಿಸಿದ್ದಾರೆ.