ಮಂಗಳೂರು, ಫೆ 09 (DaijiworldNews/SM): ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭದಲ್ಲಿ ಬಂಟ್ವಾಳ ಪೊಲೀಸರ ವಿರುದ್ಧ ದಲಿತ ದೌರ್ಜನ್ಯ ಸಮಿತಿ ದೂರು ನೀಡಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಸ್ವೀಕಕಾರ ಕಾರ್ಯಕ್ರಮ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದಿತ್ತು. ಈ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ದಲಿತ ದೌರ್ಜನ್ಯ ಸಮಿತಿ ತಮ್ಮ ಅಹವಾಲನ್ನು ತಿಳಿಸಿದೆ. ಬಂಟ್ವಾಳ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಬರಲು ತಡ ಮಾಡುತ್ತಾರೆ. ಪೊಲೀಸರು ವಾಹನ ಸಮಸ್ಯೆ ಇದೆ. ವಾಹನ ಸರಿಯಿಲ್ಲ ಎಂದು ಕಾರಣ ನೀಡ್ತಾರೆ ಎಂದು ದಲಿತ ದೌರ್ಜನ್ಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಆರೋಪ ಮಾಡಿದ್ದಾರೆ.