ಕಾಸರಗೋಡು, ಫೆ 09 (DaijiworldNews/DB): ಕೇರಳ ಸರಕಾರದ ಮುಂಗಡಪತ್ರದಲ್ಲಿನ ಜನವಿರೋಧಿ ತೆರಿಗೆ ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಜಾಥಾವನ್ನು ಉದ್ಘಾಟಿಸಿದರು.
ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ಸುಧಾಮ ಗೋಸಾಡ, ಎಂ. ಉಮಾ, ಸವಿತಾ ಟೀಚರ್, ವಿಜಯಕುಮಾರ್ ರೈ ಮೊದಲಾದವರು ನೇತೃತ್ವ ನೀಡಿದರು.