ಮಂಗಳೂರು, ಫೆ 08 (DaijiworldNews/SM): ವಿದ್ಯುತ್ ದರ ಏರಿಕೆ ಅದೊಂದು ಪ್ರೊಸೀಜರ್ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಸಂದರ್ಭ ಎಸ್ಕಾಮ್ ಯೋಜನೆಗಳನ್ನು ರೂಪಿಸುತ್ತದೆ. ವಿದ್ಯುತ್ ದರ ನಿಗದಿಗೆ ಎಸ್ಕಾಂ ತನ್ನ ಅಭಿಪ್ರಾಯವನ್ನು ಕೆಇಆರ್ ಸಿ ಮುಂದಿಡುತ್ತದೆ. ಕೆಇಆರ್ ಸಿ ಸಾರ್ವಜನಿಕ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಾರೆ. 2 ಅಭಿಪ್ರಾಯ ಪಡೆದು ಕೆಇಆರ್ ಸಿ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದಿನ ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿತ್ತು. ಇಷ್ಟು ವರ್ಷ ಇದುವೇ ಪದ್ಧತಿ ನಡೆದುಕೊಂಡು ಬಂದಿದೆ. ಈ ವರ್ಷವೂ ಕೂಡ ಅದೇ ಪದ್ಧತಿಯಲ್ಲಿ ನಡೆಯಲಿದೆ ಎಂದು ಉಡುಪಿಯಲ್ಲಿ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಪಷ್ಟನೆ ನೀಡಿದ್ದಾರೆ.