ಉಡುಪಿ, ಫೆ 08 (DaijiworldNews/DB): ತುಳು ಭಾಷೆಗೆ ಸ್ಥಾನಮಾನ ಸಂಬಂಧ ಸಾಧಕ-ಬಾಧಕಗಳ ಚರ್ಚೆಗೋಸ್ಕರ ಸಮಿತಿ ರಚಿಸಲಾಗಿದ್ದು, ಸಮಿತಿಯ ವರದಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಕನ್ನಡ ಬಿಟ್ಟು ಬೇರೆ ಏನೂ ಯೋಚನೆ ಮಾಡಲು ಸಾಧ್ಯವಿಲ್ಲ. ತುಳು ಕನ್ನಡದ ಚಟುವಟಿಕೆ ಮತ್ತು ಕನ್ನಡ ನಾಡಿನ ಜೊತೆ ಜೊತೆಗೆ ಯಾವತ್ತೂ ಇದೆ. ತುಳುನಾಡು ಪ್ರತ್ಯೇಕವಾಗಿ ಬೇಕು ಎಂದು ನಾವು ಕೇಳುತ್ತಿಲ್ಲ. ತುಳು ಭಾಷೆಗೆ ಎರಡನೇ ಆದ್ಯತೆಯನ್ನು ಕೇಳುತ್ತಿದ್ದೇವೆ ಎಂದರು.
ಕನ್ನಡಕ್ಕೆ ಪರಮೋಚ್ಚವಾದ ಎಲ್ಲಾ ಸ್ಥಾನಮಾನಗಳು ಸಿಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಆದ್ಯತೆಗಳನ್ನ ಕೊಡುವ ಪ್ರಕ್ರಿಯೆ ಇದೆ. ಹಲವಾರು ಮನವಿಗಳು ಬಂದ ನಂತರ ಸಾಧಕ ಬಾದಕಗಳ ಚರ್ಚೆಗೋಸ್ಕರ ಸಮಿತಿ ರಚಿಸಲಾಗಿದೆ . ಸಮಿತಿ ಕೊಡುವ ವರದಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದವರು ತಿಳಿಸಿದರು.