ಕಲ್ಲಡ್ಕ, ಫೆ 08 (DaijiworldNews/HR): ದೇಶದ ಪ್ರಧಾನಿ ಮಂತ್ರಿಗಳು ನವ ಭಾರತದ ನಿರ್ಮಾಣದ ಉದ್ದೇಶದಿಂದ ಉದ್ಯೋಗ ಆಧಾರಿತ ಕೋರ್ಸುಗಳನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ನತ್ತ ಹೆಚ್ಚ ಗಮನ ಹರಿಸಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದರು.
ಕಲ್ಲಡ್ಕ ಶ್ರೀರಾಮವಿದ್ಯಾಕೇಂದ್ರಕ್ಕೆ ಆಗಮಿಸಿ ಕಲ್ಲಡ್ಕ ಶ್ರೀರಾಮ ವಿದ್ಯಾರ್ಥಿಗಳ ಒಳಾಂಗಣ ಕ್ರೀಡೋತ್ಸವ ವೀಕ್ಷಿಸಿದ ಬಳಿಕ ಅಜಾದ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳಿಗೆ ಹೆಚ್ಚು ಗಮನ ಹರಿಸಿದರೆ ಸ್ಕಿಲ್ ಇಂಡಿಯಾದ ಮೂಲಕ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇಂತಹ ಸಂಸ್ಕಾರ ಯು ಶಿಕ್ಷಣ ಸಿಗುವ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಪುಣ್ಯವಂತರು. ಈ ಶಾಲೆಯ ಪ್ರತಿಯೊಂದು ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿ ಖುಷಿಪಟ್ಟಿದ್ದೇನೆ, ಇಂತಹ ಮಕ್ಕಳನ್ನು ರೂಪುಗೊಳಿಸಿದ ಕಲ್ಕಡ್ಕ ಡಾ| ಭಟ್ ಅವರಿಗೆ ಧನ್ಯವಾದ ನೀಡುತ್ತೇನೆ ಎಂದರು.
ವೇದಿಕೆಯಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಕಲ್ಲಡ್ಕ ಡಾ| ಪ್ರಭಾಕರ್ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಪ್ರಸಾದ ನೇತ್ರಾಲಯದ ನಿರ್ದೇಶಕ ಕೃಷ್ಣಪ್ರಸಾದ್ ಕೂಡ್ಲು, ಹಂಪಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಸ್.ಸಿ.ರಮೇಶ್, ಉದ್ಯಮಿ ಗಳಾದ ಬಾಲಕೃಷ್ಣ ಭಂಡಾರಿ, ನವೀನ್ ಹೆಗ್ಡೆ ಮುಂಬಾಯಿ, ವಿದ್ಯಾಕೇಂದ್ರದ ಅದ್ಯಕ್ಷ ನಾರಾಯಣ ಸೋಮಯಾಜಿ ಸಂಚಾಲಕ ವಸಂತ ಮಾದವ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರಿಯಾಂಕ ಸ್ವಾಗತಿಸಿ, ವೆಂಕಟೇಶ್ ವಂದಿಸಿದರು. ಸ್ವಾತಿನಿರೂಪಿಸಿದರು.