ಉಡುಪಿ, ಫೆ 07 (DaijiworldNews/HR): ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದಆರೋಪಿಗೆನಗರದಪ್ರಧಾನ ಸಿ.ಜೆ ಮತ್ತುಸಿ.ಜೆ.ಎಮ್ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2021 ನವೆಂಬರ್ 17 ರಂದುರಾತ್ರಿ ಸುಖೇಶ್ ನಾಯ್ಕ್ಎಂಬಾತನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ದುಗ್ಗಣ್ಣ ಬೆಟ್ಟು, ಮಾರ್ಗ ಜುಮಾದಿ ಕಟ್ಟೆ ದೇವಸ್ಥಾನದ ಹಿಂಬದಿ ರಸ್ತೆಯಲ್ಲಿರುವ ಬಾಬು ಆಚಾರ್ಯಅವರ ಮನೆಯಬೀಗ ಮುರಿದು, ಒಳಗೆ ಪ್ರವೇಶಿಸಿ, ಕಪಾಟಿನ ಲಾಕರ್ನಲ್ಲಿದ್ದಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವಹಿನ್ನೆಲೆ, ಉಡುಪಿ ನಗರಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡುಆರೋಪಿಯ ವಿರುದ್ಧದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದುಆರೋಪ ಸಾಬೀತಾದ ಹಿನ್ನೆಲೆಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್.ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾಅವರುಆರೋಪಿ ಸುಖೇಶ್ ನಾಯ್ಕ್ಎಂಬಾತನಿಗೆಭಾ.ದA.ಸA. ಕಲಂ 380ರಡಿ 5ವರ್ಷ ಮತ್ತು ಕಲಂ 457ರಡಿ 5 ವರ್ಷಗಳ ಕಾಲ ಕಠಿಣ ಸಜೆಹಾಗೂ 5000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿಹಿರಿಯಸಹಾಯಕ ಸರ್ಕಾರಿಅಭಿಯೋಜಕಿಜಯಂತಿ ವಾದ ಮಂಡಿಸಿರುತ್ತಾರೆ.