ಕಾಸರಗೋಡು, ಫೆ 06 (DaijiworldNews/SM): ಗೂಂಡಾಗಳ ವಿರುದ್ಧ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, 'ಆಪರೇಶನ್ ಆಗ್ ' ಎಂಬ ಹೆಸರಿನಲ್ಲಿ ಗೂಂಡಾ ನಿಗ್ರಹಕ್ಕೆ ಇಲಾಖೆ ಮುಂದಾಗಿದೆ.
ಶನಿವಾರ ದಿಂದ ಆರಂಭಿಸಲಾದ ಈ ಕಾರ್ಯಾಚರಣೆಯಲ್ಲಿ ಜಿಲ್ಲೆಯ 113 ಮಂದಿಯನ್ನು ಬಂಧಿಸಲಾಗಿದೆ. ಇವರನ್ನು ಜೈಲಿಗೆ ಕಳುಹಿಸಲಾಗಿದೆ. 210 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ದುಷ್ಕೃತ್ಯ, ಗೂಂಡಾಗಾರಿಕೆ ಹಾಗೂ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿ ತಲೆ ಮರೆಸಿ ಕೊಂಡವರು, ಒಂದಕ್ಕಿಂತ ಹೆಚ್ಚು ಬಾರಿ ಜೈಲುವಾಸ ಅನುಭವಿಸಿ ದವರು ಮೊದಲಾದವರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದಲ್ಲದೆ ನಿರಂತರವಾಗಿ ದುಷ್ಕೃತ್ಯ ಗಳಲ್ಲಿ ಶಾಮೀಲಾಗಿ ರುವ 422 ಮಂದಿಯನ್ನು ರೌಡಿ ಲಿಸ್ಟ್ ಗೆ ಸೇರಿಸಲಾಗಿದೆ.