ಪುತ್ತೂರು, ಫೆ 05 (DaijiworldNews/HR): ಜಿಲ್ಲೆಯ ಕೃಷಿ ಇಲಾಖೆ ಹಾಗೂ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ಸಾಮಾಜಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಇದೇ ಫೆ.10ರಿಂದ 12ರವರೆಗೆ ಸಾವಯುವ ಸಿರಿ ಯಂತ್ರಮೇಳದೊಂದಿಗೆ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ರೈತರು, ಸಾವಯುವ ಉತ್ಪನ್ನಗಳ ಉತ್ಪಾದಕರು, ಮಾರುಕಟ್ಟೆದಾರರು, ಸಾವಯುವ ಉತ್ಪನ್ನಗಳ ಮಳಿಗೆಗಳನ್ನು ಹಾಕಲು ಇಚ್ಚಿಸುವವರು ತಮ್ಮ ಮಾಹಿತಿಯನ್ನು ಮತ್ತು ಉತ್ಪನ್ನಗಳ ವಿವರಗಳನ್ನು ಮಂಗಳೂರಿನ ಉಪ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಫೆ.5ರೊಳಗೆ ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2442311 ಹಾಗೂ 9110423481ಗೆ ಕರೆ ಮಾಡಿ ಮಾಡುವಂತೆ ಕೃಷಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.