ಮಂಗಳೂರು, ಫೆ (DaijiworldNews/HR): ಇ-ಆಟೋರಿಕ್ಷಾಗಳು ಆಟೋ ರಿಕ್ಷಾಗಳು ಸಂಚಾರಿ ನಿಯಮ ಪಾಲಿಸುವುದು ಕಡ್ಡಾಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರವಿಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ವಲಯ-1ಕ್ಕೆ ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ (ಇ-ಆಟೋರಿಕ್ಷಾಗಳು) ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ವಲಯ ಸಂಖ್ಯೆ(1) ಕ್ಕೆ ಚಾಕಾಕೃತಿ ಆಕಾರದಲ್ಲಿ ಸೂಕ್ತ ರೀತಿಯ, ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್/ ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳಬೇಕು.
ವಲಯ-2ಕ್ಕೆ ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ (ಇ-ಆಟೋರಿಕ್ಷಾಗಳು)ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ಆಟೋರಿಕ್ಷಾದ ವಲಯ ಸಂಖ್ಯೆ(2)ಕ್ಕೆ ವೃತ್ತಾಕಾರದಲ್ಲಿ ಸೂಕ್ತ ರೀತಿಯ ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್/ ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳಬೇಕು.
2022ರ ನವೆಂಬರ್ 25ರಿಂದ ಯಾವುದೇ ಇ-ಆಟೋರಿಕ್ಷಾ, ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ವಾಹನ ನೋಂದಣಿಯಾಗಿದ್ದರೂ ಅಂತಹ ವಾಹನಗಳು ವಲಯ(2)ರಲ್ಲಿ ಸಂಚರಿಸಬೇಕು. ಹಾಗೂ ವಲಯ (2)ರ ಸ್ಟಿಕ್ಕರ್ ಅಂಟಿಸಿರಬೇಕು.
ಇನ್ನು ಈ ಅಧಿಸೂಚನೆ 2023ರ ಜನವರಿ 24ರಿಂದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದ್ದಾರೆ.