ಕಾಸರಗೋಡು, ಫೆ.3 (DaijiworldNews/SM): ಬದಿಯಡ್ಕ ಏಲ್ಕಾನದದಲ್ಲಿ ಕೊಲ್ಲಂ ಮೂಲದ ನೀತು ಕೃಷ್ಣ (28) ರವರ ಕೊಲೆಗೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಪತಿಯನ್ನು ಬದಿಯಡ್ಕ ಠಾಣಾ ಪೊಲೀಸರು ತಿರುವನಂತಪುರದಿಂದ ಬಂಧಿಸಿದ್ದಾರೆ,
ವಯನಾಡ್ ವೈತ್ತಿರಿಯ ಆಂಟೊ ಆಂಟನಿ (40) ಬಂಧಿತ ಆರೋಪಿ.
ಈತ ತಂಬಾನೂರಿನಲ್ಲಿರುವ ಬಗ್ಗೆ ಸೈಬರ್ ಸೆಲ್ ಮಾಹಿತಿ ಕಲೆ ಹಾಕಿದ್ದು , ಇದರಂತೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಆರೋಪಿಯನ್ನು ಶುಕ್ರವಾರ ರಾತ್ರಿ ಕಾಸರಗೋಡಿಗೆ ಕರೆದುಕೊಂಡು ಬರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಏಲ್ಕಾನದ ರಬ್ಬರ್ ಎಸ್ಟೇಟ್ ನ ಮನೆಯಲ್ಲಿ ವಾಸವಾಗಿದ್ದು , ರಬ್ಬರ್ ಟ್ಯಾಪಿಂಗ್ ಕೆಲ ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಈ ಮನೆಯಿಂದ ದುರ್ವಾಸನೆ ಕಂಡುಬಂದುದರಿಂದ ಗಮನಿಸಿದಾಗ ಕೃತ್ಯ ತಿಳಿದುಬಂದಿತ್ತು , ಅಂಟೋ ಸೆಬಾಸ್ಟಿಯನ್ ನಾಪತ್ತೆಯಾಗಿದ್ದನು.
ತನಿಖೆ ನಡೆಸಿದ ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕತ್ತು ಹಿಸುಕಿ ಕೊಲೆ ಗೈದಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.