ಮಂಗಳೂರು, ಫೆ.3 (DaijiworldNews/SM): ಫಾಝಿಲ್ ಕೊಲೆಯನ್ನು ಪ್ರತಿಕಾರದ ಕೊಲೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ, ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆಯು (ಇಂದು 3-2-23)ನಗರದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಶರಣ್ ಪಂಪ್ ವೆಲ್ ಹೇಳಿಕೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಶ್ರೀನಾಥ್ ಕಾಟಿಪಳ್ಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ, ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾಧಿಕ್ ಕಣ್ಣೂರು, ಅಶ್ಪಕ್ ಹಳೇಕಲ, ಅಸುಂತ ಡಿಸೋಜ, ಯೋಗಿತಾ, ಮುಸ್ತಫಾ ಕಲ್ಲಕಟ್ಟೆ, ಸಾಮಾಜಿಕ ಮುಖಂಡ ಮಹಮ್ಮದ್ ಸಾಲಿ ಬಜಪೆ, ಹನೀಫ್ ಬೆಂಗರೆ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.