ಬೆಳ್ತಂಗಡಿ,ಮಾ.13(AZM):ಬೆಂಕಿ ಪೊಟ್ಟಣ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಉಂಟಾದ ಘಟನೆ ಬೆಳ್ತಂಗಡಿಯ ಕನ್ಯಾಡಿಯಲ್ಲಿ ಇಂದು ನಡೆದಿದೆ.
ಫ್ಯಾಕ್ಟರಿಯಲ್ಲಿ ಯಾವುದೇ ರೀತಿಯ ಫೈರ್&ಸೇಪ್ಟಿ ಉಪಕರಣಗಳಿಲ್ಲದ ಹಿನ್ನಲೆ ಈ ಅವಘಡ ನಡೆದಿದೆ ಎನ್ನಲಾಗಿದ್ದು, ಬೆಂಕಿಯು ಪಕ್ಕದ ಗುಡ್ಡಕ್ಕೆ ಹರಡಿ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಇನ್ನು ಫ್ಯಾಕ್ಟರಿಯ ಪಕ್ಕದಲ್ಲೇ ಗ್ಯಾಸ್ ಬಂಕ್ ಇದ್ದು ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.
ಫ್ಯಾಕ್ಟರಿಯ ಮಾಲಕ ಸಜೀವನ್ ಎಂಬುವವರು ಫ್ಯಾಕ್ಟರಿಯಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ನಿರ್ಲಕ್ಷ್ಯವಹಿಸಿರುವುದೇ ಈ ಅವಘಡಕ್ಕೆ ಮೂಲ ಕಾರಣ ಎಂಬ ದೂರುಗಳು ಕೇಳಿ ಬರುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು, ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.