ಉಡುಪಿ, ಜ 31 (DaijiworldNews/SM): ಒಂದೋ ನಮಗೆ ವಿಷ ಕೊಡಿ ಇಲ್ಲವೇ ಸಮಸ್ಯೆಯನ್ನು ಬಗೆಹರಿಸಿ ಎಂದು ಉಡುಪಿ ನಗರಸಭಾ ಸದಸ್ಯ ಸುಂದರ್ ಕಲ್ಮಾಡಿ ಅಳಲು ತೋಡಿಕೊಂಡಿದ್ದಾರೆ.
ಸುಂದರ್ ಅವರು ಉಡುಪಿಯ ಕಲ್ಮಾಡಿ ವಾರ್ಡ್ ನ ಸದಸ್ಯರಾಗಿದ್ದಾರೆ. ನಗರಸಭಾ ಸಾಮಾನ್ಯ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂದ್ರಾಳಿ ನದಿ ಸಂಪೂರ್ಣ ಕಲುಷಿತವಾಗಿ ನಾಗರಿಕರಿಗೆ ಸಮಸ್ಯೆಯಾಗಿದೆ. ಪರಿಸರದಲ್ಲಿ ಮೀನುಗಳ ಮಾರಣ ಹೋಮವಾಗುತ್ತಿದೆ. ಮತ್ತೊಂದೆಡೆ ನದಿ ನೀರು ಡಾಮಾರ್ ನಂತಾಗಿದೆ.
ಯುಜಿಡಿ ಮತ್ತು ಎಸ್ ಟಿ ಪಿ ಯ ಅವ್ಯವಸ್ಥೆಯಿಂದಾಗಿ ನದಿ ನೀರು ಕಲುಷಿತವಾಗಿದೆ. ಜನರು ನಗರಸಭೆಯನ್ನು ದೂರುತ್ತಿದ್ದಾರೆ. ಈ ಸಭೆಯಲ್ಲಿ ಹೇಳಳಾಗದಂತಹ ಪದದಲ್ಲಿ ನಮಗೆ ಬಯ್ಯುತ್ತಿದ್ದಾರೆ. ಒಂದಾ ನಮಗೆ ವಿಷ ಕೊಡಿ, ಇಲ್ಲದಿದ್ದರೆ ಸಮಸ್ಯೆ ಪರಿಹರಿಸಿ ಎಂದು ನಗರಸಭೆಯನ್ನು ಸುಂದರ್ ಕಲ್ಮಾಡಿ ಆಗ್ರಹಿಸಿದ್ದಾರೆ.