ಉಳ್ಳಾಲ, ಜ 30( DaijiworldNews/MS): ವಿಶ್ವ ಹಿಂದು ಪರಿಷತ್ ಶರಣ್ ಪಂಪ್ವೆಲ್ ಅವರು ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಉದ್ರೇಕಕಾರಿ ಬಾಷಣ ಮಾಡಿ ಕರಾವಳಿಯಲ್ಲಿ ನಡೆದ ಕೋಮು ಹತ್ಯೆಗಳ ಬಗ್ಗೆ ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಜನರ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ಪ್ರಚೋದನಕಾರಿ ಭಾಷಣಮಾಡಿದ ವಿರುದ್ದ ಕೂಡಲೇ ಅವರನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಮೊಕದ್ದಮೆ ಹೂಡುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಳ್ಳಾಲ ಠಾಣೆಗೆ ಮನವಿ ನೀಡಿದೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸುರೇಶ್ ಭಟ್ನಗರ, ರಹ್ಮಾನ್ ಕೋಡಿಜಾಲ್, ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಖಾ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ ರಹ್ಮಾನ್ ಕೋಡಿಜಾಲ್, ಅಚ್ಚುತ ಗಟ್ಟಿ,ಉಳ್ಳಾಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಿಕಾ ರೈ, ಸೇವಾದಳ ಅಧ್ಯಕ್ಷ ರೂಪೇಶ್ ಭಟ್ನಗರ, ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್,ತಾಲೂಕು ಪಂಚಾಯತ್ ಮಾಜಿ ಅದ್ಯಕ್ಷ ಮೊಹಮ್ಮದ್ ಮೋನು, ತಾಲೂಕು ಪ.ಮಾಜಿ ಸದಸ್ಯ ಸಿದ್ದೀಕ್ ತಲಪಾಡಿ, ಜಬ್ಬಾರ್ ಬೋಳಿಯಾರ್, ಉಳ್ಳಾಲ ನಗರ ಸಭೆ ಉಪಾಧ್ಯಕ್ಷರಾದ ಅಯ್ಯೂಬ್ ಮಂಚಿಲ, ಸದಸ್ಯರಾದ ಮುಹಮ್ಮದ್ ಮುಕ್ಕಚ್ಚೇರಿ, ಭಾರತಿ, ಹಾಗೂ ಪ್ರಮುಖರಾದ ಝಕರಿಯ್ಯಾ ಮಲಾರ್, ಹಾರೀಸ್ ಕೋಡಿಜಾಲ್, ಮೊಯಿದಿನ್ ಬಾವ ಕೆ.ಸಿ.ರೋಡ್, ವಿಶಾಲ್ ಕೊಲ್ಯ, ದೇವಣ್ಣ ಶೆಟ್ಟಿ, ಸಾಜಿದ್ ಉಳ್ಳಾಲ್, ಹಸನ್ ಕುಂಞಿ, ದನು ಗಟ್ಟಿ, ರಾಜು ಭಂಡಶಾಲೆ, ಮೊಹಮ್ಮದ್ ಬೋಳಿಯಾರ್,ಪ್ರೇಮಾ, ಮೀರಾ, ವಾರಿಜ, ಪ್ರಭಾವತಿ ಶೆಟ್ಟಿ, ತಾಯಿರಾ, ಸಫಿಯಾ, ಮನೋರಮಾ ಉಪಸ್ಥಿತರಿದ್ದರು.