ಉಳ್ಳಾಲ, ಜ 29 (DaijiworldNews/SM): ಉಳ್ಳಾಲಕ್ಕೆ ಸುರಕ್ಷತೆಯ ಅವಶ್ಯಕತೆಯಿದೆ, ಹಿಂದೂಗಳು ಒಟ್ಟಾಗಬೇಕಿದೆ. ಉಳ್ಳಾಲದ ಜನತೆಗೆ ಶೌರ್ಯ ನೀಡುವ ಕೆಲಸ ಭಜರಂಗದಳ ಮಾಡುತ್ತಿದೆ ಎಂದು ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಉಳ್ಳಾಲದಲ್ಲಿ ನಡೆದ ಶೌರ್ಯಪಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ ಐಎ ಚಾರ್ಜ್ ಶೀಟ್ ಸಲ್ಲಿಸಿದೆ. 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಷಡ್ಯಂತ್ರ ರೂಪಿಸಲಾಗುತ್ತಿದೆ. ಷಡ್ಯಂತ್ರದ ಬಗ್ಗೆ ತನಿಖೆಯ ಸಂದರ್ಭದಲ್ಲಿ ಎನ್ ಐಎಯವರು ಹೇಳಿದರು. ಆ ಷಡ್ಯಂತ್ರಕ್ಕೆ ತೆಗೆದುಕೊಂಡ ಊರು ಕರ್ನಾಟಕದಲ್ಲಿ ಉಳ್ಳಾಲವಾಗಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳ ಪೈಕಿ ನಾಲ್ಕು ಮಂದಿ ಉಳ್ಳಾಲ ಕಾಲೇಜಿನ ವಿದ್ಯಾರ್ಥಿಗಳು ಎಂದು ಅವರು ಆರೋಪಿಸಿದ್ದಾರೆ.
ಯಾರು ಹಿಂದೂ ಸಮಾಜದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇನ್ನಷ್ಟು ಕಾರ್ಯಕರ್ತರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೋ, ಆ ಜಿಹಾದಿಗಳಿಗೆ ನಾನು ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ಪ್ರಶಾಂತ್ ಪೂಜಾರಿಯನ್ನು ಕೊಂದಿರಿ, ಶರತ್ ಮಡಿವಾಳ ಹತ್ಯೆ ಮಾಡಿದಿರಿ. ದೀಪಕ್ ರಾವ್ ಹತ್ಯೆ ಮಾಡಿದಿರಿ, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದಿರಿ.ಇನ್ನು ಮುಂದೆ ನಮ್ಮ ಕಾರ್ಯಕರ್ತರ ಇನ್ನೊಬ್ಬರ ಹತ್ಯೆಯಾದರೆ, ಒಂದಕ್ಕೆ ಎರಡು, ಎರಡಕ್ಕೆ ನಾಲ್ಕು, ನಾಲ್ಕಕ್ಕೆ ಎಂಟು ಹತ್ಯೆಯಾಗುತ್ತದೆ. ಇನ್ನು ಮುಂದೆ ನಮ್ಮ ಒಬ್ಬ ಕಾರ್ಯಕರ್ತ ಆಸ್ಪತ್ರೆ ಸೇರಿದರೆ, ನಿಮ್ಮ 10 ಜನರನ್ನು ಆಸ್ಪತ್ರೆ ಸೇರಿಸಲು ಭಜರಂಗದಳ ತಯಾರಾಗಿದೆ. ನಮ್ಮ ಕಾರ್ಯಕರ್ತರ ಬಲಿದಾನವನ್ನು ವ್ಯರ್ಥ ಮಾಡಲು ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ಧರಾಮಯ್ಯನವರ ದ.ಕ. ಜಿಲ್ಲೆ ಹಿಂದುತ್ವ ಫ್ಯಾಕ್ಟರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶರಣ್, ಹಿಂದುತ್ವ ಈ ನೆಲದ ಆತ್ಮ, ಹಿಂದುತ್ವ ಈ ನೆಲದ ಉಸಿರು. ಹಿಂದುತ್ವ ಇದ್ದ ಕಾರಣ ಕರಾವಳಿಯಲ್ಲಿ ನಾವು ಬದುಕುತ್ತಿದ್ದೇವೆ. ಹಿಂದುತ್ವದ ಕಾರಣ ಮುಸಲ್ಮಾನರು, ಕ್ರಿಶ್ಚಿಯನ್ನರು ಸುಖವಾಗಿದ್ದಾರೆ. ಹಿಂದುತ್ವ ಇದ್ದ ಕಾರಣ ಹತ್ತಾರು ಶಾಲಾ-ಕಾಲೇಜುಗಳಿವೆ. ಬೇರೆ ಬೇರೆ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಹತ್ತಾರು ಫ್ಯಾಕ್ಟರಿಗಳು ಇಲ್ಲಿವೆ, ಇದುವೇ ಹಿಂದುತ್ವ ಅಂದರೆ, ದಕ್ಷಿಣ ಕನ್ನಡ ಜಿಲ್ಲೆ ಕೇವಲ ಹಿಂದುತ್ವದ ಫ್ಯಾಕ್ಟರಿ ಮಾತ್ರ ಅಲ್ಲ. ಕೋಟಿ ಚೆನ್ನಯರ ಬೀಡು, ಸತ್ಯ ದೈವ ಸ್ವಾಮಿ ಕೊರಗಜ್ಜನ ಆದಿ ಇದು
ಪರಶುರಾಮ ದೇವರ ಸೃಷ್ಟಿ ಎಂದಿದ್ದಾರೆ.