ಪುತ್ತೂರು, ಜ 29 (DaijiworldNews/HR): ಹಲವು ಆತಂಕ, ನಿಷೇಧದ ಭೀತಿ ನಡುವೆಯು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಯಾಗುತ್ತಿದೆ. ಹೀಗೆ ಪ್ರತಿಯೊಂದು ಕಡೆಯು ನಡೆಯುತ್ತಿರುವ ಈ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಇದೀಗ ಮತ್ತೆ ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿದೆಯಾದರೂ ಮಿಂಚಿನ ಓಟದ ಕೋಣಕ್ಕೆ ಸನ್ಮಾನ ಮಾಡಿ ಮೂಖ ಪ್ರಾಣಿಯ ಮೇಲಿನ ಪ್ರೀತಿಗೆ ಪುತ್ತೂರಿನ 30ನೇ ವರ್ಷದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಾಕ್ಷಯಾಗಿದೆ.
ಕೋಣದ ಮಾಲಕರಿಗೆ, ಕೋಣ ಓಡಿಸುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು ಸಹಜ. ಆದರೆ ಕೋಣಕ್ಕೂ ಸನ್ಮಾನ ಮಾಡುವ ಮೂಲಕ ಕೋಣಗಳ ಮೇಲಿನ ಪ್ರೀತಿಯನ್ನು ಕಂಬಳ ತೋರಿಸಿದೆ. ಜ.28ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೋಣದ ಮಾಲಕರಿಗೆ, ಕೋಣ ಓಡಿಸುವ ಹಿರಿಯರಿಗೆ ಮತ್ತು ವೇಗದ ಕೋಣ ಚೆನ್ನಿಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ 30ನೇ ವರ್ಷದ ಕಂಬಳದ ನೆನಪಿನಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕೋಟಿ ಚೆನ್ನಯ ಹೆಸರಿನಲ್ಲಿ 30ನೇ ವರ್ಷದ ಕಂಬಳದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆಯನ್ನು ಮಾಡಲಾಯಿತು. ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಎಂ..ಎನ್.ರಾಜೇಂದ್ರ ಕುಮಾರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಂಬಳ ಕೂಟಕ್ಕೆ ಮೂರನೇ ತೀರ್ಪುಗಾರರಾಗಿ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಅವರನ್ನು ಇದೇ ಸಂದರ್ಭದಲ್ಲಿ ಕಂಬಳ ಸಮಿತಿಯಿಂದ ಸನ್ಮಾನಸಲಾಯಿತು.
ಚಲನ ಚಿತ್ರ ನಟ, ನಿರ್ದೇಶಕರ ಡಯಾಲ್ಗೆ ಅಭಿಮಾನಿಗಳು ಪಿಧಾ !
ಆಸ್ಕರ್ ಪ್ರಶಸ್ತಿಗೆ ಆಯ್ಕೆಗೊಂಡ ಚಲನ ಚಿತ್ರವಾದ ರಂಗಿತರಂಗ, ವಿಕ್ರಾಂತ್ ರೋಣಾ ಮೂಲಕ ಜನಪ್ರಿಯರಾದ ಪುತ್ತೂರಿನ ಅನೂಫ್ ಭಂಡಾರಿ ಅವರು ಮಾತನಾಡಿ ನಾನು ಅತಿಥಿಯಾಗಿ ಬಂದಿಲ್ಲ. ಪುತ್ತೂಋಇನ ಮಗನಾಗಿ ಬಂದಿದ್ದೇನೆ ಎಂದರಲ್ಲದೆ ತುಳುನಾಡಿನ ವೈಶಿಷ್ಟ್ಯ, ಕಲೆ ಸಂಸ್ಕೃತಿಯನ್ನು ಮರೆತಿಲ್ಲ ಮತ್ತು ಬಿಡುವುದಿಲ್ಲ. ಈ ಕ್ರೀಡೆಗೆ ಸಾವಿಲ್ಲ. ಅದಕ್ಕೆ ಸಾಕ್ಷಿ ನಿವೆಲ್ಲ. ನನ್ನ ಸಿನೇಮಾಕ್ಕೆ ಸ್ಪೂರ್ತಿ ತುಳುನಾಡು ಎಂದು ರಂಗಿತರಂಗ ಚಿತ್ರದ 'ಕೇಳೆ ಚೆಲುವೆ' ಎಂಬ ಹಾಡನ್ನು ಹಾಡಿ ರಂಜಿಸಿದರು. ಇದರೊಂದಿಗೆ ನಮ್ಮೂರ ವಿನಯ ಕುಮಾರ್ ಸೊರಕೆ, ಆರೆನ್ ಗೆಂದಾಲೆ ಎಂಬ ತಂದೆ ರಚಿಸಿದ ಹಾಡನ್ನು ಹಾಡಿದರು.
777 ಚಾರ್ಲಿ ಚಿತ್ರದ ನಟಿ ಸಂಗೀತ ಶೃಂಗೇರಿ ಅವರು ಮಾತನಾಡಿ ಪುತ್ತೂರಿನ ಪರಿಚಯ ಇದೆ. ನಾನು ಇಲ್ಲಿಗೆ ಭರತನಾಟ್ಯ ಕಲಿಯಲು ಬರುತ್ತಿದ್ದೆ. ಕಂಬಳ ನೋಡುತ್ತಿರುವುದು ಇದೇ ಮೊದಲು ಎಂದರು.
ಬಿಗ್ ಬಾಸ್ ಖ್ಯಾತಿಯ ಚಿತ್ರ ನಟಿ ಸಾನಿಯ ಅಯ್ಯರ್ ಅವರು ಮಾತನಾಡಿ ಕಂಬಳ ಜೀವನ ಶೈಲಿಯನ್ನು ಕಲಿಸಿಕೊಡುತ್ತದೆ. ಕಾಲದ ಜೊತೆಗೆ ಜೀವನ ಮತ್ತ ಕಂಬಳ ಓಟ ಇವೆರಡು ಜೀವನ ಕಲೆ ಕಲಿಸುವ ಕ್ರೀಡೆಯಾಗಿದೆ. ತುಳುನಾಡಿನ ಸಂಸ್ಕೃತಿ ಹಲವು ಪಾಠ ಕಲಿಸಿಕೊಡುತ್ತಿದೆ ಎಂದರು.
ವಿಕ್ರಾಂತ್ ರೋಣ ಖ್ಯಾತಿಯ ನಟ ವಜ್ರದೀರ್ ಜೈನ್ ಅವರು ವಿಕ್ರಾಂತ್ ರೋಣಾದ ಡಯಾಲಗ್ ಹೇಳಿದರು. ದೂರದರ್ಶನ ಚಿತ್ರದ ನಿರ್ದೇಶಕ ಸುರೇಶ್,ವಿಶೇಷ ಆಹ್ವಾನಿತರಾದ ದೈಜಿವರ್ಲ್ಡ್ ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು.