ಉಡುಪಿ, ಜ 25( DaijiworldNews/MS): ಮಲ್ಪೆಯ ಮೀನುಗಾರರ ಬಲೆಗೆ ಅಪರೂಪದ "ಗೋಲ್ಡನ್ ಅಂಜಲ್ ಫಿಶ್ ’ ಬಿದ್ದಿದೆ. ಅಟ್ಲಾಂಟಿಕ್ ಸರೋವರದಲ್ಲಿ ಹೆಚ್ಚಾಗಿ ಕಂಡುಬರುವ ಈ ಅಪರೂಪದ ಮೀನು ತನ್ನ ಬಂಗಾರ ಬಣ್ಣದಿಂದಲೇ ಆಕರ್ಷನೀಯವಾಗಿದೆ.
ಮಲ್ಪೆ ಕಡಲ ತೀರದ ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದೇ ವೇಳೆ ಅವರ ಬಲೆಗೆ 16 ಕೆಜಿಯ ಬಂಗಾರ ಬಣ್ಣದ ಮೀನು ಬಿದ್ದಿದೆ. ದಡಕ್ಕೆ ಈ ಮೀನನ್ನು ತಂದ ಬಳಿಕ ಈ ಅಪರೂಪದ ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಈ ವೇಳೆ ಸುರೇಶ್ ಎನ್ನುವವರು ಕೆಜಿಗೆ ಆರುನೂರು ರೂಪಾಯಿಗಳಂತೆ ಇಡೀ ಮೀನನ್ನೇ 9,600 ಗೆ ಖರೀದಿ ಮಾಡಿದರು.
ಗೋಲ್ಡನ್ ಅಂಜಲ್ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡು ಬರುತ್ತದೆ. ಇದಲ್ಲದೆ ಪ್ರಾಕೃತಿಕ ವೈಚಿತ್ರದಿಂದಾಗಿ ಇಲ್ಲವೇ ಅನುವಂಶಿಕದಿಂದಾಗಿ ಈ ಮೀನಿಗೆ ಬಂಗಾರ ಬಣ್ಣದ ಬರಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.