ಉಡುಪಿ, ಜ 25( DaijiworldNews/MS): ಪರ್ಕಳದ ಮಾರ್ಕೆಟ್ ಬಳಿ ನಗರಸಭೆಗೆ ಸೇರಿದ ಕಟ್ಟಡದ ಮುಂಭಾಗವಿರುವ ಮರದಿಂದ ತಟ್ಟನೆ ಹಾರಿದ ಹಾವು ಎಲ್ಲರ ಗಮನ ಸೆಳೆಯಿತು.
ಹಾರುವ ಹಾವು ಇದಾಗಿದ್ದು ಸುಮಾರು ಎರಡೂವರೆ ಫೀಟ್ ಉದ್ದವಿದ್ದು ಹಾವಿನ ಎಲ್ಲಾ ಭಾಗಗಳು ಕಪ್ಪು ಬಳಿ ಗೆರೆಗಳಿಂದ ಕೂಡಿದ್ದು , ಕೆಂಪು ಬಣ್ಣ ಹೊಂದಿದ್ದು ಅಪರೂಪದ ಹಾವನ್ನು ಕಂಡು ಸ್ಥಳೀಯರು ಭಯಬೀತರಾಗಿದ್ದರು.
ಬಳಿಕ ಉಡುಪಿಯ ಊರಗ ತಜ್ಞಗುರುರಾಜ್ ಸನಿಲ್ ರವರಿಗೆ ಮಾಹಿತಿ ನೀಡಿದಾಗ ಇದು ವಿಷ ರಹಿತ ಹಾರುವ ಹಾವು ಎಂದು ಕನ್ನಡದ ಭಾಷೆಯಲ್ಲಿ ಕರೆಯುತ್ತಾರೆ.ಮರದಲ್ಲೇ ಹುಟ್ಟಿ ಮರದಲ್ಲೇ ಜೀವಿಸುವ ಈ ಹಾವು ಕ್ರೀಮಿ ಕೀಟ, ಪಕ್ಷಗಳ ಮೊಟ್ಟೆಗಳನ್ನು ತಿಂದು ಜೀವಿಸುವ ಈ ಹಾವನ್ನು ತುಳುಬಾಷೆಯಲ್ಲಿ ಪುಲ್ಲಿ ಪುತ್ರ ಎಂದು ಕರೆಯುತ್ತಾರೆ. ಭಯಪಡುವ ಅವಶ್ಯಕತೆ ಇಲ್ಲ. ಪಶ್ಚಿಮಘಟ್ಟದ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಗುರುರಾಜ್ ಸನಿಲ್ ತಿಳಿಸಿದ್ದಾರೆ.
ಗುರುರಾಜ್ ಅವರು ನೀಡಿದ ಮಾಹಿತಿಯಂತೆ ಸ್ಥಳೀಯರಾದ ಹರೀಶ್ ಮಡಿವಾಳ ಸದಾಶಿವ ಮಡಿವಾಳ,ಶಿವರಾಂ ಪೂಜಾರಿ, ಜಯಂತ್ ಟೈಲರ್ ಗಣೇಶ್ ರಾಜ್ ಸರಳೇಬೆಟ್ಟು ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.