ಮಂಗಳೂರು, ಜ 23( DaijiworldNews/MS): "ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 'ರೌಡಿ ಶೀಟ್' ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ 783 ಮಂದಿಯನ್ನು ಮುಕ್ತಗೊಳಿಸಲಾಗಿದೆ" ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ನಡೆದ ಮಂಗಳೂರು ನಗರ ಪೊಲೀಸ್ ಪರಿವರ್ತನಾ ಸಭೆಯಲ್ಲಿ ಕಮಿಷನರ್ ಈ ಕುರಿತು ಮಾಹಿತಿ ನೀಡಿದರು.
ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 2305 ಮಂದಿ ರೌಡಿ ಶೀಟರ್ ಗಳಿದ್ದು, ಅದರಲ್ಲಿ 783 ಮಂದಿಯ ರೌಡಿ ಶೀಟ್ ತೆರವು ಮಾಡಲಾಗಿದೆ. ಇನ್ನೂ 1522 ಮಂದಿ ರೌಡಿ ಶೀಟರ್ ಗಳಿದ್ದಾರೆ.
ಕಳೆದ ವರ್ಷ ಒಂದು ಸಾವಿರಕ್ಕೂ ಅಧಿಕ ಮಂದಿಯ ರೌಡಿ ಶೀಟ್ ತೆರವುಗೊಳಿಸಲಾಗಿತ್ತು.ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಅಪರಾಧ ಪ್ರಕರಣಗಳನ್ನ ತಡೆಯಲು ನೆರವಾಗಲು ಎನ್.ಶಶಿಕುಮಾರ್ ಸೂಚನೆ ನೀಡಿದರು.