ಮಂಗಳೂರು, ಜ 22 (DaijiworldNews/SM): ಮಂಗಳೂರಿನ ಬೃಹತ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರಾವಳಿ ಜನತೆಗೆ ವಾಗ್ದಾನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಲ್ಲಿ ಕರಾವಳಿ ಅಭಿವೃದ್ಧಿಗೆ ಅಥಾರಿಟಿ ಮಾಡಿ ಎರಡೂವರೆ ಸಾವಿರ ಕೋಟಿ ಕೊಡ್ತೀವಿ ಎಂದಿದ್ದಾರೆ.
ಕರಾವಳಿಯಲ್ಲಿ ಕಾಂಗ್ರೆಸ್ ಬೆಳೆಸಿದ್ದು ಪೂಜಾರಿ, ಮೊಯಿಲಿ, ಆಸ್ಕರ್ ಫೆರ್ನಾಂಡೀಸ್. ಜನಾರ್ದನ ಪೂಜಾರಿ ಜೊತೆ ವೇದಿಕೆ ಹಂಚಿಕೊಂಡಿದ್ದೇ ನನ್ನ ಭಾಗ್ಯ. ಪೂಜಾರಿ ಒಬ್ಬ ನಿಷ್ಕಳಂಕಿತ ರಾಜಕಾರಣಿಯಾಗಿದ್ದಾರೆ. ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರ ಎನ್ನುವ ಬ್ರಾಂಡ್ ಬಂದಿದೆ. ಬಿಜೆಪಿಯವರು ಭಾವನೆ ಮೇಲೆ ನಿಮ್ಮನ್ನ ಕೆರಳಿಸ್ತಾರೆ. ಆದರೆ ನಮ್ಮದು ಭಾವನೆ ಇಲ್ಲ, ನಮ್ಮದೇನಿದ್ದರೂ ಬದುಕು. ನಾವು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಕೊಟ್ಟ ಭರವಸೆ ಈಡೇರಿಸ್ತೀವಿ ಎಂದರು.
ಅರ್ಜಿ ಹಾಕಿದವರೆಲ್ಲರೂ ಶಾಸಕನಾಗಲು ಆಗಲ್ಲ, ಒಬ್ಬರಿಗೆ ಟಿಕೆಟ್ ಕೊಡ್ತೀವಿ. ಟಿಕೆಟ್ ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಮುಖ್ಯ. ಹಾಸನ ಮತ್ತು ನನಗೆ ಮೊದಲಿನಿಂದಲೂ ಜಂಗೀ ಕುಸ್ತಿ. ಅಂಥ ಜಾಗದಲ್ಲಿ ನಿನ್ನೆ ಐವತ್ತು ಸಾವಿರ ಜನ ಇದ್ದರು. ಈ ಮೂಲಕ ಬದಲಾವಣೆ ಆಗ್ತಾ ಇದೆ, ನಮಗೆ ಭರವಸೆ ಇದೆ ಎಂದು ಡಿಕೆ ಶಿವಕುಮಾರು ತಿಳಿಸಿದ್ದಾರೆ.