ಉಡುಪಿ, ಜ 22 (DaijiworldNews/SM): ಕರಾವಳಿ ಭಾಗದ ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಬಿಜೆಪಿಯವರು ಹಿಂದೂಗಳ ಪರವಾಗಿರುವವರು ಅಲ್ಲ ಹಿಂದುತ್ವದ ಪರವಾಗಿರುವವರು ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳ ಪರವಾಗಿರುವವರು ಅಂದ್ರೆ ಮನುಷ್ಯತ್ವದ ಪರವಾಗಿರುವವರು. ಕರಾವಳಿಯಲ್ಲಿ ಆಗಿರುವ ಹತ್ಯೆಯಲ್ಲಿ ಸತ್ತವರು ಹಿಂದೂಳಿದ ಜಾತಿಯವರು. ಆರ್.ಎಸ್.ಎಸ್, ಎಂ.ಎಲ್.ಎ ಮಗ ಹತ್ಯೆಯಾದ ನಿದರ್ಶನ ಇದೆಯಾ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡ್ತಾರೆ. ಕರಾವಳಿಯನ್ನು ಹಿಂದುತ್ವದ ಲ್ಯಾಬೋರೇಟರಿ ಮಾಡೋದಕ್ಕೆ ಹೊರಟಿದ್ದಾರೆ.
ನಮ್ಮ ವಿರೋಧ ಮನುವಾದಿಗೆ, ಹಿಂದುತ್ವಕ್ಕೆ ಹೊರತು ಹಿಂದೂವಾದಿಗೆ ಅಲ್ಲ ಎಂದು ಉಡುಪಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.