ಉಡುಪಿ, ಜ 22 (DaijiworldNews/HR): ಪ್ರಮೋದ್ ಮಧ್ವರಾಜ್ ನಂಬಿಕೆ ದ್ರೋಹ ಮಾಡಿದ್ದಾರೆ. ಯಾವುದೇ ಜಾಗದಲ್ಲೂ ನಿಂತ್ರು ಪ್ರಮೋದ್ ಮಧ್ವರಾಜ್ ನ ಸೊಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತಾನಾಡಿದ ಅವರು, "ಪ್ರಮೋದ್ ಮಧ್ವರಾಜ್ಗೆ ಮಂತ್ರಿ ಮಾಡಿದೆವು. ದ್ರೋಹ ಮಾಡಿ ಬಿಜೆಪಿಗೆ ಹೋದ್ರು, ಆದರೆ ಒಬ್ಬನೇ ಕಾರ್ಯಕರ್ತ ಹೋಗಿಲ್ಲ.ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ತಂದೆ, ತಾಯಿ, ಮಗನನ್ನು ಶಾಸಕ ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ, ನಿಮಗೆ ಇನ್ನೇನು ಮಾಡಬೇಕು? ಬಿಜೆಪಿ ಟಿಕೆಟ್ ಕೊಡುತ್ತೋ? ಇಲ್ವೋ ಗೊತ್ತಿಲ್ಲ, ಆದರೆ ಅವರು ಯಾವುದೇ ಪಕ್ಷದಿಂದ ಚುನಾವಣೆಗೆ ನಿಂತರೂ ನೀವು ಅವರನ್ನು ಸೋಲಿಸಬೇಕು" ಎಂದರು.
ಇತಿಹಾಸ ಮರೆತವರು ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಬಿಜೆಪಿ ಎಲ್ಲವನ್ನೂ ಖಾಸಗಿಗಾಗಿ ಮಾರ್ತಾ ಇದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿಗಿಟ್ಟಿದ್ದಾರೆ, ಇದು ದುರಂತ. ಡಬ್ಬಲ್ ಇಂಜಿನ್ ಸರ್ಕಾರ ಅಂತ ಹೇಳ್ತಾರೆ, ಯಾವ ಮಾತು ಉಳಿಸಿಕೊಂಡಿದ್ದಾರೆ ಹೇಳಿ. ಮೀನುಗಾರರಿಗೆ ಸರಿಯಾಗಿ ಸೀಮೆಎಣ್ಣೆ ಕೊಟ್ಟಿಲ್ಲ. ಗ್ಲೋಬಲ್ ಹೂಡಿಕೆದಾರರ ಸಮಾವೇಶದಲ್ಲಿ ಕರಾವಳಿಗೆ ಏನು ಸಿಕ್ಕಿತ್ತು? ಯಾರು ಕೂಡಾ ಇಲ್ಲಿ ಹೂಡಿಕೆ ಮಾಡಲು ತಯಾರಿಲ್ಲ. ಕೋಮು ಗಲಭೆ ವಿಷ ಭಿತ್ತಿದ ಕಾರಣ ಮಕ್ಕಳು ವಿದ್ಯಾಭ್ಯಾಸ ಕ್ಕೆ ಬರುತ್ತಿಲ್ಲ. ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯ್ತಾ ಇದಾರೆ. ಯಾವ ಮಂತ್ರಿ ಮಗನೂ ಬಲಿಯಾಗಲ್ಲ. ಬಡಜನರ ಮಕ್ಕಳು ಸಾಯ್ತಾ ಇದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಳೀನ್ ಕಟೀಲ್, ಶೋಭಾ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಇದಕ್ಕೆ ಉತ್ತರಿಸಿಬೇಕು. ಹೆಣ, ಔಷಧಿಯಲ್ಲೂ ಕೋವಿಡ್ ಸಮಯದಲ್ಲಿ ಹಣ ಮಾಡಿದ್ರು. ಕರ್ನಾಟಕ 40% ಸರ್ಕಾರ ಬ್ರಾಂಡ್ ಆಗಿದೆ. ಆಮ್ಲಜನಕ ಇಲ್ಲದೆ ಸತ್ತವರ ಮನೆಗೆ, ರಾಜ್ಯ ಸರ್ಕಾರ ಭೇಟಿ ಮಾಡಿಲ್ಲ. ಸುರೇಶ್ ಅಂಗಡಿ ಶವವನ್ನೂ ಮನೆಯವರಿಗೆ ಕೊಡಲು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಗೆ ಬದಲಾವಣೆ ಬೇಕಾಗಿದೆ. ಮಹಿಳೆಯರಿಗೆ ಎರಡು ಸಾವಿರ ನೀಡಲು ತೀರ್ಮಾನ ಮಾಡಿದ್ದೇವೆ. ನಂತರ ಬಿಜೆಪಿ ಯವರು ಹೇಳ್ತಾರೆ ಇದನ್ನು ನಾವೂ ಮಾಡುತ್ತೇವೆ ಎಂದು. ಇದನ್ನು ಯಾಕೆ ಮೊದಲು ಘೋಷಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.