ಉಡುಪಿ, ಮಾ 11(SM): ಮೀನು ವ್ಯಾಪಾರದ ಬಾಕಿ ಹಣವನ್ನು ತರಲು ಹೋದ ಬಿಜೆಪಿ ಮುಖಂಡ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಡೆಕಾರು ಗ್ರಾಮಂತರ ಬಿಜೆಪಿ ಅಧ್ಯಕ್ಷ ರಿಕೇಶ್ ಪಾಲನ್(30) ನಾಪತ್ತೆಯಾದವರು.
ಮೀನು ವ್ಯಾಪಾರಿ ಯಾಗಿದ್ದ ರಿಕೇಶ್ ಮಾಚ್ 08ರಂದು ತಾನು ನೀಡಿದ ಮೀನಿನ ಪ್ಯಾಕ್ಟರಿಯಾದ ಕುಮುಟಾದ ತದಡಿಗೆ ತೆರಳಿ ತರುವುದಾಗಿ ಹೆಂಡತಿ ಬಳಿ ಹೇಳಿ ಹೋಗಿದ್ದರು. ಬಳಿಕ ಅದೇ ದಿನ ಮಧ್ಯಾಹ್ನ ಅವರ ಹೆಂಡತಿಗೆ ದೂರವಾಣಿ ಕರೆ ಮಾಡಿ ತಾನು ತದಡಿಯ ಮೀನಿನ ಫ್ಯಾಕ್ಟರಿಯಲ್ಲಿದ್ದೆನೆ ಬೇಗ ಬರುತ್ತೇನೆಂದು ತಿಳಿಸಿದ್ದರು. ನಂತರ ರಿಕೇಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಕುಮುಟಾದ ತದಡಿ ಫ್ಯಾಕ್ಟರಿಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.
ಇನ್ನು ವೀಪರಿತ ಸಾಲ ಮಾಡಿಕೊಂಡಿದ್ದ ರಿಕೇಶ ಇತ್ತೀಚೆಗೆ ಹಣಕಾಸಿನ ಮುಗ್ಗಟ್ಟಿನಿಂದ ಮನನೊಂದಿದ್ದರು. ಮಾತ್ರವಲ್ಲದೆ ಬೆಟ್ಟಿಂಗ್ ನಿಂದ ಸಾವಿರಾರು ರೂಪಾಯಿ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.