ಉಡುಪಿ, ಜ 21 (DaijiworldNews/HR): ಉಡುಪಿ ಜಿಲ್ಲೆಯಲ್ಲಿ ಪ್ರತಿಬಾವಂತ ಈಜು ಪಟುಗಳಿದ್ದು, ರಾಷ್ಟ ಮಟ್ಟ ಈಜು ಸ್ಪರ್ಧೆ ಯನ್ನು ಮಲ್ಪೆಯಲ್ಲಿ ಆಯೋಜಿಸುವ ಮೂಲಕ ಸ್ಥಳಿಯ ಪ್ರತಿಭೆ ಗೆ ಪ್ರೋತ್ಸಾಹ ದೊರೆಯಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಮಲ್ಪೆ ಬೀಚ್ ನಲ್ಲಿ ಜಿಲ್ಲಾಡಳಿತ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಎಸ್ನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರ ಮಟ್ಟದ ಒಪೆನ್ ವಾಟರ್ ಸ್ವಿಮ್ಮಿಂಗ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫೆಬ್ರವರಿ ತಿಂಗಳಲ್ಲಿ ಮಲ್ಪೆ ಯಲ್ಲಿ ರಾಷ್ಟ್ರ ಮಟ್ಟದ ಸ್ಟಡಿ ಅಪ್ ಪೆಡಲಿಂಗ್(Stady up pedaling) ಕಯಾಕಿಂಗ್ ಸ್ಪರ್ಧೆ ಕೂಡಾ ನಡೆಯಲಿದೆ. ಮಲ್ಪೆಯಲ್ಲಿ ಎಲ್ಲಾ ರೀತಿಯ ವಾಟರ್ ಸ್ಟೋಟ್ಸ್ ಗೆ ಅವಕಾಶ ಇದೆ. ಏಷ್ಯನ್ ಈಜು ಚಾಂಪಿಯನ್ ಶಿಪ್ ಗು ಎಲ್ಲಾ ಅವಕಾಶ ಇದೆ ಎಂದರು.
ಇದೇ ಸಂಧರ್ಬದಲ್ಲಿ ಮಕ್ಕಳಿಗೆ ಉಚಿತ ಕಯಾಕಿಂಗ್ ತರಬೇತಿಯ ಉದ್ಘಾಟನೆ ಕೂಡಾ ನಡೆಯಿತು. ಜೊತೆಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್ ಡೈವಿಂಗ್ ಚಟುವಟಿಕೆಗಳಿಗೆ ಕೂಡಾ ಚಾಲನೆ ಯನ್ನು ನೀಡಲಾಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚಿಂದ್ರ, ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರು, ಕೆನರಾ ಬ್ಯಾಂಕ್ ಪ್ರಬಂಧಕ ರಾಮಾ ನಾಯಕ್, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಇದ್ದರು. ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಷನ್ ನ ಸತೀಶ್ ಸ್ವಾಗತಿಸಿ,ನಿರೂಪಿಸಿದರು.