ಮಂಗಳೂರು, ಜ 20 ( DaijiworldNews/MS): ಪೊಯೆಟಿಕಾ ಕವಿಗೋಷ್ಟಿ -13 ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಜನವರಿ 14 ರಂದು ಸಂಜೆ 4 ಗಂಟೆಗೆ ಜರುಗಿತು.
ವೀಜ್ ಇ ಮ್ಯಾಗಝೀನ್ ಸಂಪಾದಕ ಡೊ.ಆಸ್ಟಿನ್ ಡಿಸೋಜಾ ಪ್ರಭು ಉದ್ಛಾಟಿಸಿದರು.ಮುಖ್ಯ ಅತಿಥಿಗಳಾಗಿ ಕೊಂಕಣಿ ಲೇಖಕ ಸಂಘದ ಅಧ್ಯಕ್ಷ ರಿಚಾರ್ಡ್ ಮೊರಾಸ್,ಎಂ.ಸಿ.ಸಿ.ಬ್ಯಾಂಕ್ ಚೆಯರ್ಮೆನ್ ಅನಿಲ್ ಫೆರ್ಮಾಯ್, ದಾಯ್ಜಿವರ್ಲ್ಡ್ ನ ಹೇಮಾಚಾರ್ಯ ಅಲ್ವಿನ್ ಪಿಂಟೊ,ನವೀನ್ ಕುಲ್ಶೆಕರ್,ಅನಿಲ್ ಪೆರ್ನಾಲ್, ಪಿಂಗಾರ ಪತ್ರಿಕೆಯ ರೇಮಂಡ್ ಡಿಕುನ್ಹಾ, ಮಾಚ್ಚಾ ಮೀಲಾರ್ ಮತ್ತಿತರರು ಉಪಸ್ಥಿತರಿದ್ದರು. ಡೊ.ಆಸ್ಟಿನ್ ಡಿಸೋಜಾ ಪ್ರಭು ಮಾತನಾಡಿ ಪೊಯೆಟಿಕಾ ಕವಿಗಳ ಈ ಹದಿಮೂರನೇ ಕವಿಗೋಷ್ಟಿ ಸಮಾಜವನ್ನು ತಮ್ಮ ಕವಿತೆಗಳ ಮುಖಾಂತರ ಎಚ್ಚರಿಸುವ, ಜಾಗ್ರತಗೊಳಿಸುವ ಅಂಕು ಡೊಂಕು ಗಳನ್ನು ತಿದ್ದುವಂತಾಗಲಿ.ಕವಿಗಳು ಕವಿತೆಗಳನ್ನು ಅಧ್ಯಯನ ಮಾಡಿ ಅವರಿಂದ ಉತ್ತಮ ಕವಿತೆಗಳು ಮೂಡಿಬರಲಿ, ವೀಜ್ ಪತ್ರಿಕೆ ಕವಿತೆಗಳಿಗೆ ವಿಶೇಷ ಸ್ಥಾನಮಾನ ನೀಡಿದ್ದು ಪ್ರತಿ ವಾರ ಪೊಯೆಟಿಕಾ ಕವಿಗಳ ಕವಿತೆಗಳನ್ನು ಆಕರ್ಷಕವಾಗಿ ಪ್ರಕಟಿಸಿ ಕವಿಗಳ ಬೆನ್ನು ತಟ್ಟುವ ಕೆಲಸ ಮಾಡುತ್ತಾ ಬಂದಿದೆ.ಈ ಕವಿಗೋಷ್ಠಿ ಯೂ ವೀಜ್ ಪತ್ರಿಕೆಯ ಪ್ರಾಯೋಜಕತ್ವದಲ್ಲೆ ಜರುಗುತ್ತಿದೆ ಎಂದು ತಿಳಿಸಿದರು.
ಕವಿಗೋಷ್ಠಿಯ ಚುಕ್ಕಾಣಿಯನ್ನು ಖ್ಯಾತ ಕವಿಗಳಾದ ಶ್ರೀಮತಿ ಲವಿ ಗಂಜಿಮಠ ಮತ್ತು ಲೊಯ್ಡ್ ರೇಗೊ ತಾಕೊಡೆ ವಹಿಸಿದ್ದರು. 36 ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.ಕವಿಗೋಷ್ಟಿಯ ಜನ ಮೆಚ್ಚಿದ ಕವಿತೆಯಾಗಿ ಕವಿ ಸಿ.ವಿ.ಲೊರೆಟ್ಟೊ ರವರ "ಯಾಕೆ ಬೇಕು ಒಂದು ರಸ್ತೆಗೆ ಕಾಲೇಜು ಹೆಸರು, ವಿಧ್ಯಾರ್ಥಿಗಳ ಬದುಕಲ್ಲಿ ಆ ಕಾಲೇಜು ಭವಿಷ್ಯ ದ ಹೆದ್ದಾರಿಗಳನ್ನೆ ನಿರ್ಮಿಸಿರುವಾಗ "ಎನ್ನುವ ಅಶಯದ ಕವಿತೆ ಆಯ್ಕೆಯಾಯಿತು. ಕವಯತ್ರಿ ಡೊ.ಪ್ಲಾವಿಯಾ ಕ್ಯಾಸ್ತೆಲಿನೊ ರಚಿಸಿದ "ಚಿನ್ನದ ಉಯ್ಯಾಲೆ" ಗೀತೆಯ ವೀಡಿಯೊ ಲೋಕಾರ್ಪಣೆಯಾಯಿತು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡೊ.ಪ್ರವೀಣ್ ಮಾರ್ಟಿಸ್ ರವರು ವಿಡಿಯೋ ಗೀತೆಯನ್ನು ಲೋಕಾರ್ಪಣೆ ಮಾಡಿದರು. ಹೇಮಾಚಾರ್ಯರವರು ಕನ್ನಡದಿಂದ ಕೊಂಕಣಿ ಗೆ ಅನುವಾದಿಸಿದ ರಾಘವೇಂದ್ರ ಪ್ರಭು ರವರ "ಅಸಂಗ"ಸಣ್ಣ ಕತೆಗಳ ಸಂಗ್ರಹ ದಾಯ್ಜಿ ಪ್ರಕಾಶನ ಪ್ರಕಟಿಸಿದ "ಎಕ್ಲೊ ಎಕ್ಸುರೊ" ಪುಸ್ತಕವನ್ನು ಡೊ.ಆಸ್ಟಿನ್ ಡಿಸೋಜಾ ಪ್ರಭು ಬಿಡುಗಡೆಗೋಳಿಸಿದರು. ಪೊಯೆಟಿಕಾ ವತಿಯಿಂದ ಡೊ.ಆಸ್ಟಿನ್ ಡಿಸೋಜಾ ಪ್ರಭು ರವರನ್ನು ಸನ್ಮಾನಿಸಲಾಯಿತು. ಇದುವರೆಗಿನ ಎಲ್ಲಾ ಕವಿಗೋಷ್ಠಿ ಗಳಿಗೆ ಪ್ರಾಯೋಜಕರಾಗಿದ್ದವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಜೆನೆಟ್ ವಾಸ್ ಬೆಂಗಳೂರು ರವರು ಅದ್ಭುತವಾಗಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಪೊಯೆಟಿಕಾ ಎಡ್ಮಿನ್ ನವೀನ್ ಪಿರೇರಾ, ಸುರತ್ಕಲ್ ಧನ್ಯವಾದ ಸಮರ್ಪಿಸಿದರು.